ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಿನ್ನವಾದ ಫೋಟೊಗ್ರಫಿಗೆ ಮಹತ್ವ ನೀಡಿ’

Last Updated 5 ಮಾರ್ಚ್ 2015, 11:26 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ):  ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇ ಷನ್ಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಕಾಪು ವಲಯದ ವತಿಯಿಂದ ಕಾಪು ಜೇಸಿ ಭವನದಲ್ಲಿ ಮಂಗಳವಾರ ನಡೆದ ಒಂದು ದಿನದ ಫೋಟೊಗ್ರಾಫಿ ತರಬೇತಿ ಕಾರ್ಯಾ ಗಾರಕ್ಕೆ ಹಿರಿಯ ಛಾಯಾಚಿತ್ರ ತರಬೇತುದಾರ ಎ. ಈಶ್ವರಯ್ಯ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಫೋಟೊಗ್ರಾಫರ್ಸ್ ಮತ್ತು ಅವರ ಫೋಟೊಗ್ರಫಿಯ ಬಗ್ಗೆ ಜನರಿಗೆ ವಿಶೇಷ ಅಭಿಮಾನವಿದೆ. ಜನರು ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಮತ್ತು ವಿಶ್ವಾಸಕ್ಕೆ ಧಕ್ಕೆಯಾಗದಂತೆ ಅದನ್ನು ಉಳಿಸಿಕೊಂಡು ಬರುವ ಜವಾಬ್ದಾರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜನರ ನಿರೀಕ್ಷೆಗೆ ತಕ್ಕಂತೆ ತಮ್ಮ ಪೂರ್ಣ ಶ್ರಮದೊಂದಿಗೆ ಸಾಮರ್ಥ್ಯಕ್ಕಿಂತಲೂ ಭಿನ್ನವಾದ ಫೋಟೊಗ್ರಫಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದರು.

ಎಸ್‌ಕೆಪಿಎ ಕೇಂದ್ರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ರಾವ್ ಮಾತ ನಾಡಿ, ಸೌತ್ ಕೆನರಾ ಫೋಟೊ ಗ್ರಾಫರ್ಸ್ ಅಸೋಸಿಯೇಷನ್ ಇತ ರೆಲ್ಲಾ ಸಂಘಟನೆಗಳಿಗೂ ಮಾದರಿ ಯಾಗಿರುವ ಸಂಘಟನೆಯಾಗಿದೆ. ಮನುಷ್ಯ ಎಷ್ಟು ಕಲಿತರೂ ಸಾಲದು ಎಂಬ ಇಂದಿನ ಯುಗದಲ್ಲಿ ಫೋಟೊ ಗ್ರಫಿಯ ಬಗ್ಗೆ ಕಿರಿಯರಿಂದ ಹಿಡಿದು ಹಿರಿಯರವರೆಗಿನ ಎಲ್ಲರಿಗೂ ಇನ್ನಷ್ಟು ಕಲಿಕೆಗೆ ಅವಕಾಶ ಮಾಡಿಕೊಟ್ಟಿರುವ ಕಾಪು ವಲಯದ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದರು.

ಉದ್ಯಮಿ ದೀಪಕ್ ಕುಮಾರ್ ಎರ್ಮಾಳ್ ಅದೃಷ್ಟ ಚೀಟಿ ಕೂಪನ್ನನ್ನು ಬಿಡುಗಡೆಗೊಳಿಸಿದರು. ಎಸ್‌ಕೆಪಿಎ ಕಾಪು ವಲಯದ ಪದಾಧಿಕಾರಿಗಳಾದ ಶ್ರೀನಿವಾಸ ಐತಾಳ್, ವೀರೇಂದ್ರ ಪೂಜಾರಿ ಶಿರ್ವ, ಪ್ರಸಾದ್ ಪ್ರಭು, ಉದಯ ಮುಂಡ್ಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್‌ಕೆಪಿಎ ಕಾಪು ವಲಯಾಧ್ಯಕ್ಷ ಪ್ರಮೋದ್ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಭಕ್ತ ಪ್ರಸಾದ್ ಪರಿಚಯಿಸಿದರು. ಹಿರಿಯ ಛಾಯಾಚಿತ್ರಗಾರ ಮನೋ ಹರ್ ಕುಂದರ್ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ನಾಯ್ಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT