ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂತ್‌ನಾಥ್‌ ರಿಟರ್ನ್ಸ್‌’ ಬಿಡುಗಡೆ ನಿರಾಳ

Last Updated 4 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಚಿತ್ರ ಬಿಡುಗಡೆಗೆ ತಡೆಯೊಡ್ಡಲು ದೆಹಲಿ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿರುವ ಹಿನ್ನೆಲೆ­ಯಲ್ಲಿ ‘ಭೂತ್‌­ನಾಥ್‌ ರಿಟರ್ನ್ಸ್‌’ ಚಲನ­ಚಿತ್ರ ನಿಗದಿಯಂತೆ ಏಪ್ರಿಲ್‌ 11ರಂದು ತೆರೆಕಾಣಲಿದೆ.

ಅಮಿತಾಬ್‌ ಬಚ್ಚನ್‌ ಮತ್ತು ಬೊಮನ್‌ ಇರಾನಿ ಪ್ರಧಾನ ಪಾತ್ರದಲ್ಲಿ ಕಾಣಿ­ಸಿ­ಕೊಂಡಿರುವ ಈ ಚಿತ್ರವನ್ನು ತನ್ನ ಸಾಹಿತ್ಯ ಕೃತಿಯೊಂದನ್ನು ನಕಲು ಮಾಡಿ ತಯಾ­­ರಿಸಲಾಗಿದೆ ಎಂದು ಹಿಂದಿ ಬರಹ­ಗಾರ­ ಸುಶಾಂತ್‌ ಸುಪ್ರಿಯಾ ಮಧ್ಯಾಂ­ತರ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಶುಕ್ರ­­ವಾರ ಈ ಅರ್ಜಿಯನ್ನು ತಿರಸ್ಕರಿಸಿದೆ.

ಮೊಕದ್ದಮೆಗೆ ಸಂಬಂಧಿಸಿದಂತೆ  ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡು­ವಂತೆ ಚಲನಚಿತ್ರದ ನಿರ್ಮಾಪ­ಕರು ಮತ್ತು ಇತರರಿಗೆ  ನ್ಯಾಯಮೂರ್ತಿ ಎ.ಕೆ. ಪಾಠಕ್‌ ಸೂಚಿಸಿದ್ದಾರೆ.

ತನ್ನ ಈ ನಿಲುವೇ ಅಂತಿಮವಲ್ಲ ಎಂದು ಹೇಳಿರುವ ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT