ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಅರಿವು ಮೂಡಿಸಿ’

Last Updated 19 ಡಿಸೆಂಬರ್ 2014, 7:08 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ‘ಪಾಕಿಸ್ತಾನದ ಪೆಶಾವರದ ಸೇನಾಶಾಲೆಯಲ್ಲಿ ಮಕ್ಕ­ಳನ್ನು ಹತ್ಯೆ ಮಾಡಿರುವುದು ಅಮಾನ­ವೀಯ. ಯಾವ ಧರ್ಮವೂ ಇಂತಹ ಹಿಂಸೆಯನ್ನು ಸಹಿಸುವುದಿಲ್ಲ’ ಎಂದು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಹೇಳಿದರು.

ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರು­­ವಾರ ಜೈನ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯ­ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳು, ಮಹಿಳೆಯರ ಮೇಲೆ  ದೌರ್ಜ­ನ್ಯದಂತಹ ಪ್ರಕರಣಗಳು ನಡೆ­ಯದಂತೆ ನೋಡಿಕೊಳ್ಳುವುದು ಸಮಾ­ಜದ ಪ್ರತಿಯೊಬ್ಬರ ಆದ್ಯ ಕರ್ತವ್ಯ.  ಈ ದಿಸೆಯಲ್ಲಿ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಮಹತ್ವ ತಿಳಿಸಬೇಕು ಎಂದು ಹೇಳಿದರು.

ವಕೀಲ ಪ್ರಕಾಶ ಹೊಸಮನಿ ಮಾತನಾಡಿ, ಸಮಾಜದಲ್ಲಿ ನಡೆ­ಯುತ್ತಿರುವ ಅತ್ಯಾಚಾರ ಪ್ರಕರಣ­ಗಳನ್ನು ವೈಭವೀಕರಿಸುವುದು ಸರಿಯಲ್ಲ. ಉತ್ತಮ ಸಂಸ್ಕಾರದ ವಿಚಾರಗಳನ್ನು ಬಿತ್ತರಿಸುವ ಕೆಲಸಗಳಾಗಬೇಕು   ಎಂದು ಹೇಳಿದರು. 

ಬಾಹುಬಲಿ ವನಕುದರೆ,  ರವಿ ದಂಡಾವತಿ, ಬಾಬು ಹೊಸಮನಿ, ಭೀಮು ದಂಡಾವತಿ, ಸಾಗರ ಉಪಾಧ್ಯೆ, ಅಪ್ಪು ದಂಡಾವತಿ, ಶ್ರೀಧರ ಹೊಸಮನಿ, ಪಾರಿಶ ಹೊಸಮನಿ, ಬಾಹುಬಲಿ ದಂಡಾವತಿ, ಅನಂತ ಪಾಕಿ, ಆದಿನಾಥ ನರಸಗೊಂಡ, ಶಿವಪುತ್ರ ಕೆಂಭಾವಿ, ಸನ್ಮತಿ ದಂಡಾವತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT