ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳು ದೇಶದ ಬಹುದೊಡ್ಡ ಅಸ್ತಿ’

Last Updated 15 ನವೆಂಬರ್ 2014, 5:21 IST
ಅಕ್ಷರ ಗಾತ್ರ

ಬೈಂದೂರು: ಮಕ್ಕಳು ದೇಶದ ಬಹು­ದೊಡ್ಡ ಆಸ್ತಿಯಾಗಿರು­ವುದ­ರಿಂದ ಅವರ ಪೋಷಣೆ, ಬೆಳವಣಿಗೆ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡ­ಬೇಕು. ಅವರಲ್ಲಿ ಸದ್ವಿಚಾರ, ಸದ್ವಿ­ವೇಕ, ಹೊಣೆಗಾರಿಕೆ ಬೆಳೆಯು­ವಂತೆ ನೋಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು.

ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನದ ನಿಮಿತ್ತ ಏರ್ಪಡಿಸಿದ್ದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ­ದಲ್ಲಿ ಅವರು ಮಾತನಾಡಿದರು.

ಶಾಲೆಯ ಅತ್ಯಂತ ಕಿರಿಯ ವಿದ್ಯಾರ್ಥಿ ಪ್ರಕೃತಿ ಶೆಟ್ಟಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶ್ಯಾನು­ಭಾಗ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋ­ಪಾಧ್ಯಾಯ ಜನಾರ್ದನ ದೇವಾಡಿಗ, ಸುಮನಾ, ತಿಮ್ಮಪ್ಪ ಗಾಣಿಗ, ಪತ್ರಕರ್ತರಾದ ನರಸಿಂಹ ನಾಯಕ್, ಎಸ್. ಅರುಣಕುಮಾರ, ರೂಪ್ಲಾ ಕಾಮತ್್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT