ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಕಲಿಕೆಯಲ್ಲಿ ನೈತಿಕ ಶಿಕ್ಷಣ ಇಲ್ಲ’

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೆಂಗೇರಿ: ‘ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅನಾಚಾರ, ದುರಾಚಾರಗಳಿಂದಾಗಿ ಶೈಕ್ಷಣಿಕ ವ್ಯವಸ್ಥೆಯ ಘನತೆಗೆ ಕುಂದು­ಬಂದಿದೆ. ಮಾಧ್ಯಮಗಳಲ್ಲಿ ಅಸಹ್ಯಕರ­ವಾದ, ಉದ್ರೇಕ, ಪ್ರಚೋದಕ ಕಾರ್ಯಕ್ರಮಗಳಿಂದಾಗಿ ನಮ್ಮ ಮಕ್ಕಳ ಕಲಿಕೆಯಲ್ಲಿ ನೈತಿಕ ಶಿಕ್ಷಣ ಇಲ್ಲವಾಗಿದೆ. ಇದು ಒಂದು ರೀತಿಯ ಸಾಂಸ್ಕೃತಿಕ ಹಲ್ಲೆ’ ಎಂದು ಸಾಹಿತಿ ಪ್ರೊ.ಎಸ್‌.ಜಿ.­ಸಿದ್ಧರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ನಡೆಸಿದ ಮಾಹಿತಿ ಮನರಂಜನೆ ಉಪನ್ಯಾಸ ಕಾರ್ಯಕ್ರಮ­ದಲ್ಲಿ ಮಾತನಾಡಿದರು.

‘ಕೆಲ ದಶಕಗಳ ಹಿಂದಿನ ಶಾಲಾ ವ್ಯವಸ್ಥೆಗಳಲ್ಲಿ ಮಾನವೀಯತೆಯಿತ್ತು. ಆದರೆ, ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ರೀತಿ- ನೀತಿ ಇಲ್ಲದಿರುವುದರಿಂದ ನಮ್ಮತನವನ್ನು ಕಳೆದುಕೊಳ್ಳ­ಲಾಗು­ತ್ತಿದೆ. ಸರ್ಕಾರದ ಯೋಜನೆ­ಗಳನ್ನು ಜನಗಳಿಗೆ ತಿಳಿಸುವ ಪ್ರಯುಕ್ತ ವಾರ್ತಾ ಇಲಾಖೆಯವರ ಈ ಕಾರ್ಯಕ್ರಮ­ಗಳು ಉಪಯುಕ್ತ­ವಾಗಿವೆ’ ಎಂದರು.

ಈ ಸಂದರ್ಭದಲ್ಲಿ ಮಕ್ಕಳು ಜನಪದ ಕಲಾ­ಪ್ರದರ್ಶನ ಹಾಗೂ ತೊಗಲುಬೊಂಬೆ ನಾಟಕಗಳನ್ನು  ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT