ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತದಾರರಲ್ಲದವರ ವಿರುದ್ಧ ಪ್ರಕರಣ’

Last Updated 13 ಫೆಬ್ರುವರಿ 2016, 7:09 IST
ಅಕ್ಷರ ಗಾತ್ರ

ದೇವದುರ್ಗ: ದೇವದುರ್ಗ ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ಅಂತಿಮ ದಿನ ಗುರುವಾರಕ್ಕೆ ಮುಕ್ತಾಯಗೊಂಡಿರುವುದರಿಂದ ತಾಲ್ಲೂಕಿನ ಮತದಾರರು ಅಲ್ಲದೆ ಬೇರೆ ವ್ಯಕ್ತಿಗಳು ಕ್ಷೇತ್ರದಲ್ಲಿ ಕಂಡು ಬಂದರೆ ಅಂಥವರ ವಿರುದ್ಧ ಕ್ರಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್‌ ಹೇಳಿದರು.

ಗುರುವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಉಪ ಚುನಾವಣೆಯನ್ನು ನಡೆಸಲಾಗುತ್ತದೆ. ಇದಕ್ಕಾಗಿ ಎಲ್ಲ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನರ ಸಹಕಾರ ಅಗತ್ಯ ಎಂದರು.

ಮತದಾನದ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಅವರು, ತಾಲ್ಲೂಕಿನಲ್ಲಿ ಅಂತಿಮವಾಗಿ 2,80,606 ಮತದಾರರು ಇದ್ದು, ಇವರ ಪೈಕಿ 1,40,160 ಪುರುಷರು, 1,40,441 ಮಹಿಳೆಯರು ಮತ್ತು 24 ತೃತೀಯ ಲಿಂಗಿಗಳು ಮತದಾನದ ಹಕ್ಕನ್ನು ಹೊಂದಿದ್ದಾರೆ. ಒಟ್ಟು 247 ಮತಗಟ್ಟೆಗಳಲ್ಲಿ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆ ಅಧಿಕಾರಿ ಸೇರಿದಂತೆ ಸಿಬ್ಬಂದಿಗೆ ಉಪಹಾರ ಮತ್ತು ಉಟಕ್ಕಾಗಿ ಈ ಬಾರಿ ಪ್ರತಿ ಮತಗಟ್ಟೆಗೆ ತಲಾ ₹800 ನೀಡಲಾಗುತ್ತದೆ. 60ವೆಬ್‌ ಕ್ಯಾಸ್ಟಿಂಗ್‌ ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ಮತದಾನದ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಮತದಾರರನ್ನು ಮತಗಟ್ಟವರೆಗೆ ವಾಹನದಲ್ಲಿ ಕರೆದುಕೊಂಡು ಬರುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಪಟ್ಟಣದ ಹೊರವಲಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಫೆ.13ರಂದು ಮತಯಂತ್ರಗಳನ್ನು ಇಲ್ಲಿಂದ ಕಳಿಸುವುದು ನಂತರ ಅದೇ ದಿನ ಸಂಜೆ ಪಡೆದುಕೊಂಡು ರಾಯಚೂರಿಗೆ ಕಳಿಸಲಾಗುವುದು.
ಈಗಾಗಲೇ ನಿಗದಿತ ಪಡಿಸಿದಂತೆ ಫೆ. 16ರಂದೇ ಉಪ ಚುನಾವಣೆಯ ಮತಏಣಿಕೆಯನ್ನು ರಾಯಚೂರಿನ ಇನ್‌ಫೆಂಟ್‌ ಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನಸಿಂಗ್‌ ರಾಠೋಡ್‌ ಮಾತನಾಡಿ, 247 ಮತಗಟ್ಟೆಗಳ ಪೈಕಿ 64 ಅತಿ ಸೂಕ್ಷ್ಮ, 84 ಸೂಕ್ಷ್ಮ ಮತ್ತು 100 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದ್ದು, ಚುನಾವಣಾ ಬಂದೋಬಸ್ತ್‌ಗಾಗಿ 700 ಜನ ಪೊಲೀಸ್‌ ಇಲಾಖೆ ಸಿಬ್ಬಂದಿ ಮತ್ತು 300 ಜನ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದು ಅಲ್ಲದೆ 200ಕ್ಕೂ ಹೆಚ್ಚು ಗಡಿ ಭದ್ರತಾ ಪಡೆ ಸಿಬ್ಬಂದಿ, 4 ತುಕಡಿ ಕೆಎಸ್‌ಆರ್‌ಪಿ, 7 ತುಕಡಿ ಡಿಆರ್‌ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಮತಗಟ್ಟೆ ಮತ್ತು ಅದರ ಸುತ್ತಮುತ್ತ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ ಎಂದ ಅವರು, ಅತಿ ಸೂಕ್ಷ್ಮ, ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದರು. ವಿವಿಧ ವಿಶೇಷ 54 ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸುಮಾರು 195 ಜನರ ಬಗ್ಗೆ ಚುನಾವಣೆಯ ಪ್ರಯುಕ್ತ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಅವರ ಚಲನವಲನಗಳ ಬಗ್ಗೆ ಇಲಾಖೆ ನಿಗಾ ಇಡಲಾಗಿದೆ ಎಂದರು.

***
247 ಮತಗಟ್ಟೆಗಳ ಪೈಕಿ 180 ಮತಗಟ್ಟೆಗಳಲ್ಲಿ ಮೈಕ್ರೋ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 60 ಕ್ಯಾಮೆರಾ ಸಿಬ್ಬಂದಿ ಇದ್ದಾರೆ.
-ಸಸಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT