ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಬಿಟ್ಟ ಮಕ್ಕಳ ರಕ್ಷಣೆ ಎಲ್ಲರ ಹೊಣೆ’

Last Updated 28 ಜುಲೈ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮನೆಬಿಟ್ಟು ಬರುವ ಮಕ್ಕ­ಳನ್ನು ರಕ್ಷಿಸುವುದು ಎಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್‌ ಜಿ. ನಿಜಗಣ್ಣವರ ಹೇಳಿದರು.

ಯಶವಂತಪುರದಲ್ಲಿ ‘ಸಾಥಿ’ ಸಂಸ್ಥೆ ಸೋಮ­­ವಾರ ಆಯೋಜಿಸಿದ್ದ ಮನೆ­­ಬಿಟ್ಟು ಬಂದ ಮಕ್ಕಳನ್ನು ಪೋಷ­ಕ­ರಿಗೆ ಒಪ್ಪಿ­ಸುವ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಸಂಪತ್ತು ಎಂದು ಹೇಳು­ತ್ತೇವೆ. ಪೋಷ­ಕ­ರಿಂದಲೇ ತೊಂದರೆ ಅನುಭವಿಸಿ ಅನೇಕ ಮಕ್ಕಳು ಮನೆ­ಬಿಟ್ಟು ಬರುತ್ತಿದ್ದಾರೆ.ಆದರೆ ಎಲ್ಲ ಮಕ್ಕಳೂ ಭಾಗ್ಯ­ವಂತ­ರಾ­ಗಿರುವುದಿಲ್ಲ. ಮಕ್ಕಳ ಇಚ್ಛೆಗೆ ವಿರುದ್ಧವಾಗಿ ನಡೆದು­ಕೊಂಡರೆ ಮಕ್ಕಳು  ಮನೆಬಿಟ್ಟು ಹೋಗಿ ಸಮಾಜ­ಘಾ­ತು­ಕರಾಗಿ ಬೆಳೆ-ಯುವ ಅಪಾಯ­­­ವಿದೆ ಎಂದರು.

‘ಸಾಥಿ’ಯಂಥ ಸ್ವಯಂಸೇವಾ ಸಂಸ್ಥೆ­ಗಳ ಜೊತೆ ಸಾರ್ವಜನಿಕರು ಕೈಜೋ­ಡಿಸಿ ಮಕ್ಕಳ ರಕ್ಷಣೆಗೆ ಮುಂದಾ­­ಗ­ಬೇಕು ಎಂದು ಹೇಳಿದರು.
‘ಸಾಥಿ’ ಸಂಸ್ಥೆಯ ಕಾರ್ಯದರ್ಶಿ ಬಸ­ವ­­ರಾಜ್‌ ಮಾತನಾಡಿ, ‘ನಗರದ ರೈಲ್ವೆ ನಿಲ್ದಾಣಗಳಲ್ಲದೆ ರಾಜ್ಯದ ಉಳಿದ ರೈಲ್ವೆ ನಿಲ್ದಾಣಗಳಲ್ಲಿಯೂ ಎಂಟರಿಂದ ಹತ್ತು ವಯಸ್ಸಿನ ಮಕ್ಕಳು ಕಾಣಸಿ­ಗು­ತ್ತಾರೆ. ಪ್ರತಿದಿನ ಸರಾಸರಿ ಹುಬ್ಬಳ್ಳಿ­ಯಲ್ಲಿ 5, ಅರಸೀಕೆರೆಯಲ್ಲಿ 8 ಮಕ್ಕಳು ಪತ್ತೆ­­ಯಾ­­ಗುತ್ತಿದ್ದಾರೆ. ಎರಡು ವರ್ಷ­ಗ­ಳಲ್ಲಿ 10 ಸಾವಿರ ಮಕ್ಕಳನ್ನು ಪೋಷಕ­ರಿಗೆ ಒಪ್ಪಿಸಲಾಗಿದೆ’ ಎಂದರು.

ಆಂಧ್ರಪ್ರದೇಶ, ಉತ್ತರಪ್ರದೇಶ, ರಾಜ­ಸ್ತಾನ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ಜಾರ್ಖಂಡ್‌ನಿಂದ ಬಂದ ಪೋಷ­­­ಕ­ರಿಗೆ ಮಕ್ಕಳನ್ನು
ಒಪ್ಪಿಸ­ಲಾ­­ಯಿತು. ಹೆಚ್ಚುವರಿ ವಿಭಾಗೀಯ  ರೈಲ್ವೆ ವ್ಯವ­ಸ್ಥಾಪಕಿ ಸುನಂದ ಅರುಲ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT