ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲಾಲಾ ಬದುಕು ಜಗತ್ತಿಗೆ ಮಾದರಿ’

Last Updated 20 ಅಕ್ಟೋಬರ್ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಭಯೋತ್ಪಾದಕರ ವಿರುದ್ಧ ನಿರಂತರ ಹೋರಾಟ  ನಡೆಸಿದ ಮಲಾಲಾ ಅವರ ಬದುಕು ಜಗತ್ತಿಗೆ ಮಾದರಿಯಾಗಿದೆ’ ಎಂದು ಕವಿ ಸಿದ್ದ­ಲಿಂಗಯ್ಯ ಅವರು ಅಭಿಪ್ರಾಯಪಟ್ಟರು.

ಆಕೃತಿ ಪುಸ್ತಕ ಪ್ರಕಾಶನವು  ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ  ಸಮಾ­ರಂಭ­ದಲ್ಲಿ ಪಾಕಿಸ್ತಾನದ ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ  ಮಲಾಲಾ ಯೂಸಫ್‌ ಝಾಯಿ ಅವರ ಆತ್ಮ­ಕಥೆಯ ಕನ್ನಡ ಅನುವಾದ ‘ನಾನು ಮಲಾಲಾ’ ಕೃತಿಯನ್ನು ಬಿಡುಗಡೆ­ಗೊಳಿಸಿ ಅವರು ಮಾತನಾಡಿದರು.

‘ಭಯೋತ್ಪಾದಕರ ವಿರುದ್ಧ ಹೋರಾಡಿ ಮಲಾಲಾ ಜಗತ್ತಿಗೆ ಮಾದ­ರಿ­ಯಾದರು. ಅವರ ಆದರ್ಶಗಳನ್ನಿ­ಟ್ಟು­ಕೊಂಡು ಅಸ್ಪೃಶ್ಯತೆ ಎಂಬ ಸಾಮಾಜಿಕ ವಿಕೃತಿಯ ವಿರುದ್ಧ ಹೋರಾಟ ನಡೆಸ­ಬೇ­ಕಾದ ಅನಿವಾರ್ಯತೆ ಇದೆ’ ಎಂದರು.

‘ಭಯೋತ್ಪಾದನೆ ಕೇವಲ ಪಾಕಿಸ್ತಾ­ನಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ನಾನಾ ಭಾಗಗಳಲ್ಲಿ ಹರಡಿಕೊಂಡಿದೆ.  ಈ ಕೃತಿಯಲ್ಲಿ ಮಲಾಲಾ ಅವರು ತನಗಾದ ಕಷ್ಟಗಳನ್ನೆಲ್ಲ ಹೇಳಿಕೊಂಡಿ­ದ್ದಾರೆ. ತನ್ನ ಜೀವನವನ್ನು ಪಣಕ್ಕಿಟ್ಟು ವಿದ್ಯಾಭ್ಯಾಸ ಮಾಡಿ ಇತರರು ವಿದ್ಯಾ­ಭ್ಯಾಸ ಮಾಡುವಂತೆ ಪ್ರೇರೇಪಿಸಿದ್ದಾರೆ.  ಇಷ್ಟು ಚಿಕ್ಕ ವಯಸ್ಸಿನಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಎರಡು ವರ್ಷಗಳ ಹಿಂದೆ ಪಾಕಿ­ಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿ­ಬಾನ್‌ ಗುಂಡಿಗೆ ಎದೆಯೊಡ್ಡಿ ಸಾವನ್ನು ಗೆದ್ದವರು ಅವರು,  ಭಯೋತ್ಪಾದನೆ ವಿರುದ್ಧ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮಾಡಿದ ಮಲಾಲಾ ಅವರ ಧೈರ್ಯ ಮತ್ತು ದಿಟ್ಟತನ  ಅನುಕರಣೀ­ಯವಾದದ್ದು’ ಎಂದರು.

‘ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಶೋಷಣೆಗಳು ಉಳಿದು­ಕೊಂಡಿವೆ. ಕೆಲ ಸಮುದಾಯವನ್ನು ಎರ­ಡನೇ ದರ್ಜೆ ಪ್ರಜೆಗಳಂತೆ ಕಾಣುವುದು ಕೂಡ ಒಂದು ರೀತಿಯಲ್ಲಿ ಭಯೋತ್ಪಾ­ದನೆ. ಇಂತಹ ಶೋಷಣೆಯ ವಿರುದ್ಧ ಹೋರಾಡಲು ನಮ್ಮ ಮನಸ್ಸುಗಳು ಜಾಗೃತಗೊಳಿಸಬೇಕು’ ಎಂದರು.

ಸಾಹಿತಿ ಬೊಳು­ವಾರು ಮಹಮದ್‌ ಕುಂಞ,  ‘ಪ್ರಜಾ­ವಾಣಿ’ ಮುಖ್ಯ ಉಪ­ಸಂಪಾದಕ ಡಾ.ಜಿ.ಬಿ.ಹರೀಶ್‌,   ಲೇಖಕ ಬಿ.ಎಸ್. ಜಯಪ್ರಕಾಶ ನಾರಾಯಣ ಉಪಸ್ಥಿತ­ರಿದ್ದರು.  ಬೆಲೆ ರೂ. 250.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT