ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಧ್ಯಮ ಯಾವುದೇ ಇರಲಿ ಮಾತು ಕನ್ನಡವಾಗಿರಲಿ’

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲಿಕೆಯ ಮಾಧ್ಯಮ ಯಾವುದೇ ಇರಲಿ. ಮಾತನಾಡುವ, ಚಿಂತಿಸುವ ಭಾಷೆಯಾಗಿಯಾದರೂ ಕನ್ನಡವನ್ನು ಉಳಿಸಬೇಕಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು. ಬಸವನಗುಡಿಯ ಕಹಳೆ ಬಂಡೆ ಉದ್ಯಾನದಲ್ಲಿ ಭಾನುವಾರ ‘ಅವಿಷ್ಕಾರ’ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ  ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿನ ಭಾಷೆಯಾದ ಕನ್ನಡ ಬೆಂಗಳೂರಿನಲ್ಲಿ ನಾಶವಾಗುವ ಹಾದಿಯಲ್ಲಿದೆ. ಸಾಂಸ್ಕೃತಿಕ ಸಂಸ್ಥೆಗಳು ಪ್ರಸ್ತುತಪಡಿಸುವ ಬೀದಿ ನಾಟಕಗಳಲ್ಲಿ ಈ ವಿಷಯವನ್ನೇ ಆದ್ಯತೆಯಾಗಿ ಪರಿಗಣಿಸಬೇಕಾಗಿದೆ’ ಎಂದು ಸಲಹೆ ನೀಡಿದರು. ‘ಟಿವಿ ಕಾರ್ಯಕ್ರಮಗಳಿಂದ ಮಕ್ಕಳ ಮನಸು ಹಾಳಾಗುತ್ತಿದೆ. ಟಿವಿಗಳಲ್ಲಿ ಮಕ್ಕಳ ಮನಸನ್ನು ಅರಳಿಸುವ ಕಾರ್ಯಕ್ರಮಗಳು ಬರುತ್ತಿಲ್ಲ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಹಿರಿಯ ರಂಗಕರ್ಮಿ ಎಸ್‌.ಜಿ. ಸೋಮಶೇಖರ್‌ ಮಾತನಾಡಿ, ‘ಕಚೇರಿಯಲ್ಲಿದ್ದ ಇಂಗ್ಲಿಷ್‌ ಭಾಷೆ ಕ್ರಮೇಣ ಹಜಾರಕ್ಕೆ ಬಂತು. ನಂತರ ನಡುಮನೆಗೆ, ಬಂತು. ಈಗ ಅಡುಗೆಮನೆಯನ್ನೂ ಆಕ್ರಮಿಸಿದೆ. ಅನ್ನ, ಸಾಂಬಾರ್‌, ಮೊಸರು ಎಂಬ ಪದಗಳನ್ನೂ ಬಳಸುತ್ತಿಲ್ಲ. ತರಕಾರಿಗಳ ಹೆಸರುಗಳನ್ನೆಲ್ಲ  ಇಂಗ್ಲಿಷ್‌ನಲ್ಲೇ ಹೇಳುತ್ತೇವೆ. ನಾಟಕ ಸಿನಿಮಾಗಳಲ್ಲಿ ಮಾತ್ರ  ಕನ್ನಡ ಉಳಿದಿದೆ’ ಎಂದು ಹೇಳಿದರು. ಖ್ಯಾತ ನಾಟಕಕಾರ ಷೇಕ್ಸ್‌ಪಿಯರ್‌ನ ‘ಮರ್ಚಂಟ್‌ ಆಫ್‌ ವೆನಿಸ್‌’ ನಾಟಕದ ಕೆಲ ತುಣುಕುಗಳನ್ನು ಸೋಮಶೇಖರ್‌ ಪ್ರಸ್ತುತಪಡಿಸಿದರು.

ನಂತರ ಮಕ್ಕಳ ಮಂಟಪ ತಂಡದಿಂದ ‘ಪಂಜರಶಾಲೆ’ ನಾಟಕ, ವಿಜಯಲಕ್ಷ್ಮಿ ಅವರಿಂದ ಕ್ರಾಂತಿಗೀತೆ, ಸೃಜನ ಸಾಂಸ್ಕೃತಿಕ ತಂಡದಿಂದ ಭಾವಗೀತೆ, ಎಂ.ಆರ್‌. ದೊರೆಸ್ವಾಮಿ ಸಂಗೀತ ಅಕಾಡೆಮಿಯ ಮಕ್ಕಳಿಂದ  ಕೊಳಲುವಾದನ,  ಭರತನಾಟ್ಯ, ಸಮೂಹಗಾಯನ  ಕಾರ್ಯಕ್ರಮ  ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT