ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವ ಕುಲದ ಮೇಲೆ ನಡೆದ ದಾಳಿ’

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿ-ಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರೊಂದಿಗೆ ಮಂಗಳವಾರ ರಾತ್ರಿ ದೂರವಾಣಿಯಲ್ಲಿ ಮಾತನಾಡಿ ಪೆಶಾವರ ಶಾಲೆ ಮೇಲಿನ ದಾಳಿಗೆ ಸಂತಾಪ ಸೂಚಿಸಿದ್ದಾರೆ.   ‘ಈ ಘೋರ ದುರಂತವು ಇಡೀ ಜಗತ್ತಿನ ಆತ್ಮಸಾಕ್ಷಿಯನ್ನೇ ಅಲುಗಾ­ಡಿಸಿದೆ. ಇದು ಇಡೀ ಮಾನವಕುಲದ ಮೇಲೆ ನಡೆದ ದಾಳಿ’ ಎಂದು ಮೋದಿ ಹೇಳಿದರು.

  ‘ಭಾರತ ಹಾಗೂ ಪಾಕಿಸ್ತಾನಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಮಾನವೀ­ಯ­ತೆಯಲ್ಲಿ ನಂಬಿಕೆ ಇಟ್ಟವರು ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ  ಕೈಜೋಡಿಸ-ಬೇಕು’ ಎಂದೂ ತಿಳಿಸಿದರು. 

ಸಂಸತ್‌ನಲ್ಲಿ ಖಂಡನೆ: ಪೆಶಾವರ ಶಾಲೆ ಮೇಲೆ ನಡೆದ ಉಗ್ರರ ದಾಳಿಯನ್ನು  ಸಂಸತ್ತಿನಲ್ಲಿ ಖಂಡಿಸಲಾಯಿತು. ಉಭಯ ಸದನಗಳಲ್ಲಿಯೂ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT