ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಮ್’ನಿಂದ ಚಿತ್ರ ರವಾನೆ

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮಂಗಳ ಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದ 20 ದಿನಗಳ ನಂತರ ಇಸ್ರೊದ ಮಂಗಳ­ಯಾನ ನೌಕೆ  (ಮಾಮ್‌) ಮಂಗಳ­ವಾರ ಕೆಂಪು ಗ್ರಹದ ಎರಡು  ಉಪ­ಗ್ರಹಗಳ ಚಿತ್ರ­ಗಳನ್ನು ಯಶಸ್ವಿಯಾಗಿ ರವಾನಿಸಿದೆ. ಆ ಮೂಲಕ ಭಾರತದ ಮಂಗಳಯಾನದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಇಸ್ರೊ  ಮಂಗಳವಾರ ಸಾಮಾಜಿಕ ಜಾಲತಾಣ­ದಲ್ಲಿ ಅಂಗಾರಕನ ಉಪಗ್ರಹ­ಗಳ ಚಿತ್ರಗಳು ಹಾಗೂ ಪುಟ್ಟ ವಿಡಿಯೊ ತುಣುಕುಗಳನ್ನು ಹಂಚಿ­ಕೊಂಡಿದೆ.  ‘ಮಂಗಳನ ಸುತ್ತಲಿನ ಕಕ್ಷೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಈ ಎರಡೂ ದೊಡ್ಡ ಉಪಗ್ರಹಗಳು ಪ್ರದಕ್ಷಿಣೆ ಹಾಕು­ತ್ತಿವೆ’ ಎಂದು ಇಸ್ರೊ ಮಾಹಿತಿ ನೀಡಿದೆ. ಮಂಗಳನ ಮೇಲ್ಮೈನಿಂದ 66,275 ಕಿ.ಮೀ ಎತ್ತರದಿಂದ ನೌಕೆ ಈ ಚಿತ್ರಗಳನ್ನು ಸೆರೆ ಹಿಡಿದಿದೆ.

27/22/18 ಕಿ.ಮೀ ವ್ಯಾಸವನ್ನು ಹೊಂದಿರುವ ಉಪಗ್ರಹಗಳು ದಿನಕ್ಕೆ ಮೂರು ಬಾರಿ ಮಂಗಳನ ಸುತ್ತ ಪ್ರದ­ಕ್ಷಿಣೆ ಹಾಕುತ್ತವೆ. ಈ ಉಪಗ್ರಹಗಳು ಪ್ರತಿ ನೂರು ವರ್ಷಕ್ಕೆ 1.8 ಮೈಲು­ಗಳಷ್ಟು ಸಮೀಪಿಸು­ತ್ತಿವೆ. ಇನ್ನೂ  500 ವರ್ಷಗಳಲ್ಲಿ ಈ ಉಪಗ್ರಹಗಳು ಮಂಗಳ­ನಿಗೆ ಡಿಕ್ಕಿ ಹೊಡೆಯಬಹುದು.  ಇಲ್ಲವೇ ಚೂರುಗಳಾಗಿ ಅಂಗಾರಕನ ಉಂಗುರುಗಳಾಗುವ  ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT