ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಹದಿ ಅನುಸರಿಸುತ್ತಿದ್ದ ಶೇ.60 ಮಂದಿ ಮುಸ್ಲಿಂಮೇತರರು’

Last Updated 15 ಡಿಸೆಂಬರ್ 2014, 11:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ) : ಇಸ್ಲಾಮಿಕ್ ಸ್ಟೇಟ್‌ (ಐ.ಎಸ್‌) ಭಯೋತ್ಪಾದನಾ ಸಂಘಟನೆ ಕುರಿತ ಟ್ವಿಟರ್‌ ಖಾತೆ ನಿರ್ವಹಣೆ ಮಾಡುತ್ತಿದ್ದ  ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧಿತ ನಾಗಿರುವ ಮೆಹದಿ ಮಸ್ರೂರ್‌ ಬಿಸ್ವಾಸ್‌ನ ವಿಚಾರಣೆಯ ವೇಳೆಯಲ್ಲಿ ಖಾತೆಯನ್ನು ಅನುಸರಿಸುತ್ತಿದ್ದವರಲ್ಲಿ ಶೇ.60ರಷ್ಟು ಮಂದಿ ಮುಸ್ಲಿಂಯೇತರರು ಹಾಗೂ ಉಳಿದವರಲ್ಲಿ ಹೆಚ್ಚಿನವರು ಪಾಶ್ಚಿಮಾತ್ಯ ದೇಶಗಳ ಮುಸ್ಲಿಂಮರು  ಅದರಲ್ಲಿ ಮುಖ್ಯವಾಗಿ ಬ್ರಿಟನ್‌ನವರು ಎಂದು ಲೋಕಸಭೆಯಲ್ಲಿ ಗೃಹಸಚಿವ ರಾಜನಾಥ ಸಿಂಗ್‌ ತಿಳಿಸಿದರು.

24 ವರ್ಷದ ಮೆಹದಿಯ ಚಟುವಟಿಕೆಯು ಐಎಸ್‌ಗೆ ಸಂಬಂಧಿಸಿದ ಟ್ವಿಟರ್‌ ಖಾತೆಯ ನಿರ್ವಹಣೆಯನ್ನು ಮಾಡುತ್ತಿದ್ದ. ತನ್ನ ಮುಖಾಂತರ ಐಎಸ್ ಸಂಘಟನೆಗೆ  ನೇಮಕಗೊಂಡ ಬಗ್ಗೆ ಹೇಳಲು ನಿರಾಕರಿಸಿದ್ದಾನೆ ಎಂದರು.

ಮೆಹದಿಯ ವಿಚಾರ ತಿಳಿಯಲು ಬ್ರಿಟನ್‌ನ ಸುದ್ದಿ ವಾಹಿನಿ ಚಾನಲ್‌ 4 ಪ್ರಮುಖ ಪಾತ್ರ ನಿರ್ವಹಿಸಿತ್ತು. ಈತನನ್ನು ಬಂಧಿಸುವಲ್ಲಿ ಕೇಂದ್ರ ಗುಪ್ತಚರದ ಮಾಹಿತಿಯ ಆಧಾರದಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾದರು.

ಮೆಹದಿ ಪ್ರಮುಖವಾಗಿ ಅರೇಬಿಕ್‌ ಭಾಷೆಯ ಐಎಸ್‌ ಸಂಬಂಧಿತ ಲೇಖನಗಳನ್ನು ಇಂಗ್ಲಿಷ್‌ಗೆ ಭಾಷಂತರಿಸಿ ತನ್ನ @ShamiWitness ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸುತ್ತಿದ್ದ ಎಂದು ಗೃಹ ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT