ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇರಿಕೋಮ್‌’ಗೆ ಪ್ರಶಸ್ತಿ

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರಿಯಾಂಕ ಛೋಪ್ರಾ ಅಭಿಯನದ ‘ಮೇರಿ ಕೋಮ್‌’ ಚಲನಚಿತ್ರವು ಸ್ಟಾಕ್‌ ಹೋಂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಜೂನಿಯರ್‌ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.

ಒಲಿಂಪಿಕ್‌ ಪದಕ ಪುರಸ್ಕೃತರಾದ, ಬಾಕ್ಸರ್‌ ಮೇರಿ ಕೋಮ್‌ ಅವರ ಜೀವನ ಚರಿತ್ರೆ ಆಧರಿಸಿದ ಈ ಚಿತ್ರವು ಕಂಚಿನ ಪದಕ ಗಳಿಸಿದ್ದು, ವಿಶೇಷ ಗೌರವಕ್ಕೆ ಪಾತ್ರವಾಗಿದೆ.

ಈ ಕುರಿತು ಮಾತನಾಡಿರುವ ಚಲನಚಿತ್ರದ ನಿರ್ದೇಶಕ ಒಮುಂಗ್‌ ಕುಮಾರ್‌ ಅವರು, ಸ್ವೀಡನ್‌ನಲ್ಲಿ ನಡೆದ ಸ್ಟಾಕ್‌ಹೋಂ ಚಲನಚಿತ್ರೋತ್ಸವದಲ್ಲಿ ಕಂಚಿನ ಪದಕ ಗಳಿಸಿದ್ದು, ಜೂನಿಯರ್‌ ವಿಭಾಗದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ ಎಂದಿದ್ದಾರೆ.
‘ಮೇರಿಕೋಮ್‌’ ಟೊರಾಂಟೊ ಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT