ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈ–ಸೂರು’ ಆ್ಯಪ್‌ ಲೋಕಾರ್ಪಣೆ

Last Updated 2 ಜನವರಿ 2016, 9:53 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಪಂಚಾಯಿತಿ ರೂಪಿಸಿರುವ ‘ಮೈ–ಸೂರು’ ಮೊಬೈಲ್‌ ಆ್ಯಪ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬಿಡುಗಡೆ ಮಾಡಿದರು.

ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸುವ ಈ ಆ್ಯಪ್‌ ಅನ್ನು www.mysuru.nic.in ಜಾಲತಾಣದಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್‌ ಅವರ ಪರಿಕಲ್ಪನೆಯಲ್ಲಿ ರೂಪಿಸಿರುವ ಈ ಮೊಬೈಲ್‌ ಆ್ಯಪ್‌ನ ರೂಪರೇಷೆಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ. ಗೋಪಾಲ್‌ ಸಿದ್ಧಪಡಿಸಿದ್ದಾರೆ. ಎನ್ಐಸಿ ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಮೈ–ಸೂರು ಮೊಬೈಲ್‌ ಆ್ಯಪ್‌ನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳಲ್ಲಿ ಸರ್ಕಾರದಿಂದ ರೂಪಿಸಲಾಗಿರುವ ಯೋಜನೆಗಳಿಗೆ ಸಂಬಂಧಿಸಿದ ಪೂರ್ಣ ಮಾಹಿತಿ, ನಾಗರಿಕ ಸನ್ನದು, ದೂರು ಸಲ್ಲಿಸುವ ಅವಕಾಶವಿದೆ.

ಇಲಾಖೆಗಳ ಜಾಲತಾಣಗಳ ಲಿಂಕ್‌, ಜಿಲ್ಲಾಮಟ್ಟ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಈ ಆ್ಯಪ್‌ನಲ್ಲಿ ಲಭ್ಯ ಇರುತ್ತವೆ. ರೈತರಿಗೆ ಬೇಕಾದ ಮಾಹಿತಿಯೂ ಈ ಆ್ಯಪ್‌ ಮೂಲಕ ಸಿಗಲಿದೆ.

ಕುಂದುಕೊರತೆಗಳನ್ನು ನಾಗರಿಕರು ಚಿತ್ರ ಸಮೇತ ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT