ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಗೆ ಮತ ಹಾಕಿದರೆ ಸಮುದ್ರಕ್ಕೆ ಹಾರಬೇಕಾಗುತ್ತದೆ’

Last Updated 28 ಏಪ್ರಿಲ್ 2014, 9:49 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮತ ಹಾಕಿದವರು ಸಮುದ್ರಕ್ಕೆ ಹಾರಬೇಕಾ­ಗುತ್ತದೆ’ ಎಂದು ಭಾನುವಾರ ಹೇಳುವ ಮೂಲಕ ಕೇಂದ್ರ ಸಚಿವ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ವಿವಾದಕ್ಕೆ ನಾಂದಿ ಹಾಡಿದ್ದಾರೆ.

‘ಮೋದಿಗೆ ಮತ ಹಾಕದವರು ಪಾಕಿ­ಸ್ತಾನಕ್ಕೆ ಹೋಗಬೇ­ಕಾ­ಗುತ್ತದೆ ಎಂದು ಬಿಜೆಪಿ ನಾಯಕ ಗಿರಿರಾಜ್‌ ಸಿಂಗ್‌ ಹೇಳಿ­ಕೆಗೆ ನೀಡಿದ ಪ್ರತಿಕ್ರಿಯೆ ಇದು ಎಂದು ಫಾರೂಕ್‌ ಸ್ಪಷ್ಟನೆ ನೀಡಿದ್ದಾರೆ. ಕನ್ಯಾರ್‌ನಲ್ಲಿ ನಡೆದ ಚುನಾವಣಾ ರ್‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಜನತೆ ಕೋಮುವಾದವನ್ನು ಸ್ವೀಕಾರ ಮಾಡು­ವುದಿಲ್ಲ. ದೇಶದಲ್ಲಿ ಕೋಮುವಾದ ವ್ಯಾಪಕವಾದರೆ ಕಾಶ್ಮೀರಿ­­ಗಳು ಭಾರತ­ದ­ಲ್ಲಿರಲು ಬಯ­ಸು­ವುದಿಲ್ಲ ಎಂದು ಹೇಳಿದರು.

‘ಕೋಮುವಾದಿ ಶಕ್ತಿಗಳಿಂದ ನಮ್ಮನ್ನು ರಕ್ಷಿಸು ಎಂದು ದೇವರಲ್ಲಿ ಪ್ರಾರ್ಥಿಸು­ತ್ತೇನೆ. ಭಾರತ ಎಂದಿಗೂ ಕೋಮು­ವಾದ ರಾಷ್ಟ್ರವಾಗಲು ಸಾಧ್ಯ­ವಿಲ್ಲ’ ಎಂದರು. ಫಾರೂಕ್‌ ಅಬ್ದುಲ್ಲಾ ರ್‍್ಯಾಲಿ ಆಯೋ­ಜಿಸಿದ್ದ ಸ್ಥಳದ ಸಮೀಪದಲ್ಲೇ ಸ್ಫೋಟವೊಂದು ಸಂಭವಿಸಿದ್ದರಿಂದ ಸಾರ್ವ­­­ಜನಿಕರ ಮತ್ತು ಭದ್ರತಾ ಸಿಬ್ಬಂದಿಯ ಆತಂಕಕ್ಕೆ ಕಾರಣವಾಯಿತು. ‘ಇಂತಹ ಕೃತ್ಯಗಳಿಂದ ನಾನು ಎದೆ­ಗುಂದುವುದಿಲ್ಲ ಮತ್ತು ಓಡಿಯೂ ಹೋಗು­­ವುದಿಲ್ಲ’ ಎಂದೂ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT