ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಸ್ಟೇಟ್ಸ್‌ಮನ್‌ ಅಲ್ಲ ಸೇಲ್ಸ್‌ಮನ್‌’

ವಿವಿಧ ಜಾಗತಿಕ ಸಂಶೋಧನಾ ಸಂಸ್ಥೆಗಳ ಅಭಿಪ್ರಾಯ
Last Updated 1 ಜುಲೈ 2016, 11:56 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಟೇಟ್ಸ್‌ಮನ್‌’ ಅಲ್ಲ ‘ಸೇಲ್ಸ್‌ಮನ್‌’ ಎಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ.

ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಗಾಲೆಲ್ಲ ಸ್ಟೇಟ್‌ಮನ್‌ ಆಗಿ ವರ್ತಿಸದೇ  ಸೇಲ್ಸ್‌ಮನ್‌ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳು ಇಲ್ಲಿವೆ .

ಒಬ್ಬ ಸೇಲ್ಸ್‌ಮನ್‌ ಒಂದು ವಸ್ತುವನ್ನು ಮಾರಾಟ ಮಾಡಲು ಅನುಸರಿಸುವ ತಂತ್ರವನ್ನು ಮೋದಿ ಕೂಡ ಅನುಸರಿಸುತ್ತಿದ್ದಾರೆ (ಭಾರತದ ಆರ್ಥಿಕ ಬೆಳವಣಿಗೆ ವಿಷಯದಲ್ಲಿ). ಅವರ ಲೆಕ್ಕವಿಲ್ಲದ ವಿದೇಶಿ ಪ್ರವಾಸಗಳಲ್ಲಿ ಭಾಷಣಗಳು, ದತ್ತಾಂಶಗಳು, ವಾಕ್ಯಗಳು ಪದೇ ಪದೇ ಪುನಾರವರ್ತನೆಯಾಗಿರುವುದನ್ನು ಬಿಟ್ಟರೆ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುತ್ತಾರೆ ವಿದೇಶಿ ಮೂಲದ ವಿಶ್ಲೇಷಕರು!

ಉದ್ಯೋಗ ಸೃಷ್ಟಿ, ಬಂಡವಾಳ ಕ್ರೂಡೀಕರಣ  ಸೇರಿದಂತೆ ಮೇಕಿನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ಟಾರ್ಟ್‌ಅಪ್‌ನಂತಹ ಜನಪ್ರಿಯ ಯೋಜನೆಗಳು ಮಾಧ್ಯಮಗಳಲ್ಲಿ ವಿಜೃಂಬಿಸುತ್ತಿವೇಯೇ ಹೊರತು ಗಮನಾರ್ಹ ಪ್ರಗತಿ ಕಂಡುಬಂದಿಲ್ಲ  ಎಂದು ಅಂಕಿ ಅಂಶಗಳು ಹೇಳುತ್ತವೆ.

ಜಿಡಿಪಿ ವೃದ್ಧಿದರದ ಕತೆ ಅಯೋಮಯ!
ಮೋದಿ ಕಳೆದ ತಿಂಗಳು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ಜಿಡಿಪಿ ದರ ವೃದ್ಧಿಯಾಗುತ್ತಿದೆ ಎಂದು ಹೇಳಿದ್ದರು. ವಾಸ್ತವವಾಗಿ ಭಾರತದ ಜಿಡಿಪಿ ದರ ಕಳೆದ ಮೂರು ವರ್ಷಗಳಲ್ಲಿ ಶೇ. 2.1ರಷ್ಟು ಅಂಶವನ್ನು ದಾಟಿಯೇ ಇಲ್ಲ! ಆದರೂ ಮೋದಿ ನಮ್ಮ ಜಿಡಿಪಿ ದರ ಪ್ರಗತಿಯಲ್ಲಿದೆ ಎನ್ನುತ್ತಾರೆ! ಆಶ್ಚರ್ಯದ ಸಂಗತಿ ಎಂದರೆ 2014ರಲ್ಲಿ ಕೈಗೊಂಡಿದ್ದ ವಿದೇಶ ಪ್ರವಾಸಗಳಲ್ಲಿ ಅವರು ಮಾಡಿದ ಭಾಷಣಗಳು, ಹೇಳಿದ ದತ್ತಾಂಶಗಳು 2016ರಲ್ಲೂ ಪುನಾರವರ್ತನೆಯಾಗುತ್ತಿವೆ ಎಂಬುದನ್ನು  ’ಟ್ರೆಡಿಂಗ್‌ ಎಕಾನಮಿಕ್ಸ್‌’ ಎಂಬ ಸಂಸ್ಥೆ ಪತ್ತೆ ಹಚ್ಚಿದೆ.

ಆಂತರಿಕ ಉತ್ಪಾದನೆಯಲ್ಲೂ ಪ್ರಗತಿ ಇಲ್ಲ ?
ವಿದೇಶ ಪ್ರವಾಸಗಳಲ್ಲಿ ಮೋದಿ ನೀಡುವ ದತ್ತಾಂಶಗಳಿಗೂ, ಇತ್ತೀಚೆಗೆ ವಿಶ್ವಬ್ಯಾಂಕ್‌ ನೀಡಿರುವ ಅಂಕಿ ಅಂಶಗಳಿಗೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಗಮನಿಸಬಹುದು.  ಮೋದಿ ಅವರು ದೇಶದ ಆಂತರಿಕ ಉತ್ಪಾದನೆ ಶೇ.3ರಷ್ಟನ್ನು ಸಮೀಪಿಸುತ್ತಿದೆ ಎಂದು ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ನಮ್ಮ ಆಂತರಿಕ ಉತ್ಪಾದನೆ 2.1ರಷ್ಟಿದೆ ಎಂದು ವಿಶ್ವಬ್ಯಾಂಕ್‌ ಇತ್ತೀಚೆಗೆ ಮಾಹಿತಿ ಬಿಡುಗಡೆ ಮಾಡಿದೆ.

ಉದ್ಯೋಗ ಸೃಷ್ಟಿಯಲ್ಲೂ ಹಿನ್ನಡೆ!
2015ನೇ ಸಾಲಿನಲ್ಲಿ  ಮೊದಲನೇ ಮತ್ತು ಎರಡನೇ ತ್ರೈಮಾಸಿಕ ಹಾಗೂ 2016ರ ಮೊದಲ ತ್ರೈಮಾಸಿಕ ವರ್ಷದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರಾಸರಿ ಶೇ. 1.75 ರಷ್ಟು  ಅಲ್ಪ  ಏರಿಕೆ ಕಂಡಿದೆ. ವಿದೇಶಿಗರಿಗೆ ಭಾರತದಲ್ಲಿ ಉದ್ಯೋಗ ಕೊಡುವುದಾಗಿ ಮೋದಿ ವಿದೇಶಿ ನೆಲದ ಭಾಷಣಗಳಲ್ಲಿ  ಹೇಳುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಶೇ 10 ರಷ್ಟು ಪ್ರಗತಿ ಸಾಧಿಸಿ   ರುವುದಾಗಿ ಮೋದಿ ಹೇಳುತ್ತಿದ್ದಾರೆ.  ಆದರೆ ಕಾರ್ಮಿಕ ಇಲಾಖೆಯ ಅಂಕಿ ಅಂಶಗಳ  ಪ್ರಕಾರ  ಶೇ.1.75ರಷ್ಟು ಮಾತ್ರ ಪ್ರಗತಿಯನ್ನು ಕಾಣಬಹುದು. ಮೋದಿ ಕೊಡುವ ಅಂಕಿ ಅಂಶಗಳಿಗೂ ಕೇಂದ್ರ ಕಾರ್ಮಿಕ ಇಲಾಖೆ ನೀಡಿರುವ ಅಂಕಿ ಅಂಶಗಳಿಗೂ ತಾಳೆಯಾಗದಿರುವುದು  ವಿಪರ್ಯಾಸ!



ವಿದೇಶ ಪ್ರವಾಸಗಳಲ್ಲಿ ಮೋದಿ ನೀಡುತ್ತಿರುವ ಅಂಕಿಅಂಶಗಳಿಗೂ ಮತ್ತು ವಾಸ್ತವ ದತ್ತಾಂಶಗಳಿಗೂ ತಾಳೆಯಾಗುತ್ತಿಲ್ಲವಾದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ವರ್ಚಸ್ಸು ಕುಸಿಯುತ್ತಿದ್ದು ಅವರನ್ನು ಸೇಲ್ಸ್‌ಮನ್‌ಗೆ ಹೋಲಿಕೆ ಮಾಡಲಾಗುತ್ತಿದೆ!

ಆಧಾರ: ಫಸ್ಟ್‌ಪೋಸ್ಟ್‌, ವಿಶ್ವಬ್ಯಾಂಕ್‌, ಟ್ರೆಡಿಂಗ್‌ ಎಕಾನಮಿಕ್ಸ್‌, ಕಾರ್ಮಿಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT