ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷಗಾನ ವಿಶ್ವಮಾನ್ಯ ಕಲೆ’

ಬೈಕಾಡ್ತಿ ಯಕ್ಷ ಪ್ರಶಸ್ತಿ ಪ್ರದಾನ ಸಮಾರಂಭ
Last Updated 30 ಜನವರಿ 2016, 4:21 IST
ಅಕ್ಷರ ಗಾತ್ರ

ಬ್ರಹ್ಮಾವರ: ಕರಾವಳಿ ಭಾಗದ ಯಕ್ಷ ಗಾನ ಕಲೆ ಇಂದು ವಿಶ್ವಮಾನ್ಯವಾಗಿದೆ. ಜಾತಿ ಬೇಧವಿಲ್ಲದೆ ಸುಸಂಸ್ಕೃತರಾಗಿ ಬಾಳಲು ನಮ್ಮ ಹಿರಿಯರು ಯಕ್ಷಗಾನದ ಮೂಲಕ ಕಂಡು ಕೊಂಡರು. ಇಂದಿನ ಯುವ ಪೀಳಿಗೆ ಇದರ ಬಗ್ಗೆ ಆಸಕ್ತಿ ತಾಳಿ ಕಲಿತಾಗ ಅದು ಮುಂದೆ ಬೆಳೆದು ಕಿರಿಯರಿಗೆ ದಾರಿ ದೀಪವಾಗುತ್ತದೆ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ ವಿಜಯ ಬಲ್ಲಾಳ್ ಹೇಳಿದರು.

ಬೈಕಾಡಿಯ ಬೈಕಾಡ್ತಿ ಅಮ್ಮನವರ ಯಕ್ಷಗಾನ ಕಲಾ ಸಂಘದ ದ್ವಿತೀಯ ವಾರ್ಷಿಕೋತ್ಸವ ಮತ್ತು ಬೈಕಾಡ್ತಿ ಯಕ್ಷ ಪ್ರಶಸ್ತಿ ಪ್ರಧಾನ ಹಾಗೂ ನೂತನ ಕೃತಿ ನಾಗ ತೇಜಸ್ವಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರ ಯಕ್ಷಗಾನ ಸಂಘ ಹುಟ್ಟಿಕೊಳ್ಳುತ್ತಿರು ವುದು ಕಂಡಾಗ ಯಕ್ಷಗಾನಕ್ಕೆ ಖಂಡಿತಾ ಅಳಿವಿಲ್ಲ ಅನಿಸುತ್ತದೆ. ಇದಲ್ಲದೇ ಯಕ್ಷ ಶಿಕ್ಷಣದ ಮೂಲಕ ಅನೇಕ ಕಲಾವಿದರು ಮತ್ತು ಪ್ರೇಕ್ಷಕರು ಸೃಷ್ಟಿಯಾಗುತ್ತಿರು ವುದು ಒಳ್ಳೆಯ ವಿಚಾರ ಎಂದು ಹೇಳಿದರು.

ಸಮಾರಂಭದಲ್ಲಿ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುರೇಂದ್ರ ಶೆಟ್ಟಿ, ಬೈಕಾಡ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭ ರಾಧಾಕೃಷ್ಣ ಚೇರ್ಕಾಡಿ ಇವರಿಗೆ ಬೈಕಾಡ್ತಿ ಯಕ್ಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಸವ ಶೆಟ್ಟಿ ಬೈಕಾಡಿ ಇವರನ್ನು ಗೌರವಿಸ ಲಾಯಿತು. ಕೃತಿ ರಚನಾಕಾರರಾದ ರಿತೇಶ್ ಮತ್ತು ಪ್ರಶಾಂತ್ ಇವರನ್ನು ಸನ್ಮಾನಿಸಲಾಯಿತು. ರಾಜೇಶ್ ಆಚಾರ್ಯ ಸ್ವಾಗತಿ ಸಿದರು. ವಿಶ್ವ ರೂಪ ಮಧ್ಯಸ್ಥ ವಂದಿಸಿ ದರು. ದಯಾನಂದ ಕಾರ್ಯಕ್ರಮ ನಿರೂ ಪಿಸಿದರು. ನಂತರ ಸಂಘದ ಸದಸ್ಯರಿಂದ ನೂತನ ಪ್ರಸಂಗ ನಾಗ ತೇಜಸ್ವಿ ಯಕ್ಷಗಾನ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT