ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಭೂಮಿಗೆ ಭಾರತ ಆದರ್ಶ’

Last Updated 29 ಜುಲೈ 2014, 20:31 IST
ಅಕ್ಷರ ಗಾತ್ರ

ಕೆಂಗೇರಿ: ‘ಇಡೀ ಪ್ರಪಂಚದಲ್ಲಿನ ರಂಗ­ಭೂಮಿಕೆಯಲ್ಲಿ ಗ್ರೀಕ್ ದೇಶವೊಂದನ್ನು ಹೊರತುಪಡಿಸಿದರೆ ರಂಗಭೂಮಿಗೆ ಭಾರತದ ಸಂಸ್ಕತಿಯೇ ಆದರ್ಶ’ ಎಂದು ಬೆಂಗಳೂರು ವಿಶ್ವವಿದ್ಯಾಲ­ಯದ ಯೋಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನಾಗೇಶ್ ವಿ. ಬೆಟ್ಟಕೋಟೆ ಹೇಳಿದರು.

ನಾಟ್ಯ ಸರಸ್ಪತಿ ಶಾಂತಲಾ ಕಲಾ ಸಂಘದ ವತಿಯಿಂದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ಎರಡು ದಿನಗಳ ನಾಟಕೋತ್ಸವವನ್ನು ಉದ್ಘಾ­ಟಿಸಿ ಮಾತನಾಡಿದರು.

‘ನಮ್ಮ ನೆಲದ ರಂಗಸಜ್ಜಿಕೆಗೆ ಅಪೂರ್ವ ಹಿನ್ನೆಲೆ ಇರುವುದರಿಂದಲೇ, ವಿದೇಶಿ ವಿದ್ವಾಂಸರೆಲ್ಲರಿಗೆ ಭಾರತದ ಕಲೆಯೇ ಸಂಶೋಧನಾ ವಸ್ತುವಾಗಿದೆ. ಇದಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಮುಂಬರುವ ಪೀಳಿಗೆಗೆ ನಮ್ಮ ಕಲೆ, ಸಾಹಿತ್ಯ, ಸಂಗೀತ, ಜನಪ­ದದ ಪರಿಚಯ ಮಾಡಿ ನಮ್ಮ ಸಂಸ್ಕತಿ­ಯನ್ನು ಉಳಿಸಬೇಕಾಗಿದೆ’ ಎಂದರು.

ಸಮಾಜಸೇವಕ ಕೆ.ಸಿ. ಬೆಟ್ಟಸ್ವಾಮಿ­ಗೌಡ, ‘ನಾಟಕ ಜನಪದಗಳಲ್ಲಿ ನೀತಿ­ಯಿ­ರುತ್ತದೆ. ಇವುಗಳನ್ನು ಪೋಷಿಸುವು­ದರಿಂದ ನಮ್ಮ ಸಂಸ್ಕತಿಯನ್ನು ಕಾಪಾ­ಡಿದಂತೆ. ಇದು ನಮ್ಮ ಅಳಿಸಲಾರದ ಸಂಪತ್ತು’ ಎಂದರು.

ಅಮರೇಶ್ವರ ನಾಟಕ ಮಂಡಳಿಯ ಸ್ಥಾಪಕ ಹಿರಿಯ ರಂಗಕರ್ಮಿ ಗುಬ್ಬಿ ಚನ್ನಬಸವಯ್ಯನವರನ್ನ ಸನ್ಮಾನಿಸ­ಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT