ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಭೂಮಿ ಸಮಾಜ ಪರಿವರ್ತನೆಯ ಮಾಧ್ಯಮ’

Last Updated 19 ಸೆಪ್ಟೆಂಬರ್ 2014, 9:28 IST
ಅಕ್ಷರ ಗಾತ್ರ

ರಾಮನಗರ: 'ರಂಗಭೂಮಿ ಇಂದು ಕೇವಲ ಮನರಂಜನೆಯ ಮಾಧ್ಯಮ­ವಾಗಿ ಉಳಿದಿಲ್ಲ. ಅದು ಸಮಾಜ­ಮುಖಿ­ಯಾಗಿರುವುದು ಮತ್ತು ಸಮಾಜದ ಪರಿ­ವರ್ತನೆಗೆ ಸಾಂಸ್ಕೃತಿಕ ಮಾಧ್ಯಮವಾಗಿ­ರುವುದರಿಂದಲೇ ರಂಗಭೂಮಿ ಹೊಸ ಹೊಸ ಪ್ರಯೋಗಗಳ ಮೂಲಕ ಪ್ರಖ­ರವಾಗಿ ಬೆಳೆಯುತ್ತಿದೆ' ಎಂದು ಕರ್ನಾ­ಟಕ  ನಾಟಕ ಅಕಾಡೆಮಿ ಸದಸ್ಯ ಗುಡಿ­ಹಳ್ಳಿ ನಾಗರಾಜ ತಿಳಿಸಿದರು.

ಗೋಕುಲಾಷ್ಠಮಿ ಅಂಗವಾಗಿ ತಾಲ್ಲೂ­­ಕಿನ ಕೃಷ್ಣಾಪುರದೊಡ್ಡಿಯಲ್ಲಿ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಭಾನು­­ವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪೌರಾಣಿಕ ರಂಗಗೀತ­ಗಾಯನ ಸ್ಪರ್ಧೆಯಲ್ಲಿ ವಿಜೇತರಾದ­ವರಿಗೆ ಬಹುಮಾನ ವಿತರಿಸಿ ಅವರು ಮಾತ­ನಾಡಿದರು.

‘ಪ್ರಪಂಚದಲ್ಲಿ ಹಲ­ವು ಮಾದ್ಯಮಗಳು ಹೆಚ್ಚು ಮನ­ರಂಜನೆಯನ್ನು ನೀಡುತ್ತಾ ಬಂದಿದ್ದರೂ ರಂಗ­ಭೂಮಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ರಂಗಭೂಮಿ ಕಲೆಯ ಬಗ್ಗೆ ಯುವ ಸಮುದಾಯ ಹೆಚ್ಚು ಹೆಚ್ಚು ಆಸಕ್ತರಾಗುತ್ತಿರುವುದು ಇದ­ಕ್ಕಿರುವ ಶಕ್ತಿಯನ್ನು ತೋರಿಸುತ್ತದೆ' ಎಂದು ತಿಳಿಸಿದರು.

‘ರಂಗಭೂಮಿಯು ಯುವ ಸಮು­ದಾ­ಯದಲ್ಲಿ ಆತ್ಮವಿಶ್ವಾಸವನ್ನು ಮೂಡಿ­ಸುತ್ತದೆ. ಮಕ್ಕಳಲ್ಲಿ ಸಂಕುಚಿತ ಮನೋ­ಭಾವನೆಯನ್ನು ತೊಡೆದು ಹಾಕಿ ಅವರು ಸಮಾಜಮುಖಿಯಾಗಿರುವಂತೆ ಪ್ರೇರೇಪಿ­ಸುತ್ತದೆ. ಅಲ್ಲದೆ ಅವರಲ್ಲಿರುವ ಪ್ರತಿಭೆ­ಯನ್ನು ಹೊರಹಾಕಲು ಸಹಾಯ  ಮಾಡು­ತ್ತದೆ’ ಎಂದು ತಿಳಿಸಿದರು.

ಗೋಕುಲಾಷ್ಠಮಿ ಅಂಗವಾಗಿ ಮಕ್ಕಳಿ­ಗಾಗಿ ರಾಧಾಕೃಷ್ಣ ವೇಷಭೂಷಣ ಸ್ಪರ್ಧೆ ನಡೆಯಿತು. ರಾತ್ರಿ ನಾಡಿನ ಹೆಸರಾಂತ ಮಹಿಳಾ ವೃತ್ತಿ ಕಲಾವಿದರ ತಂಡವು ಬಿ.ಆರ್. ಅರಿಷಿಣಗೋಡಿ ಅವರು ರಚಿ­ಸಿರುವ, ಮಾಲತಿಶ್ರೀ ಮೈಸೂರು ನಿರ್ದೇಶ­ನದಲ್ಲಿ ಪ್ರದರ್ಶಿಸಲಾದ ಹಾಸ್ಯ ನಾಟಕ ‘ಬಸ್ ಕಂಡಕ್ಟರ್’ ಮನರಂಜಿಸಿತು.

ವಿಜೇತರು: ರಾಜ್ಯ ಮಟ್ಟದ ಪೌರಾಣಿಕ ರಂಗಗೀತಗಾಯನ ಸ್ಪರ್ಧೆಯಲ್ಲಿ ಚಂದ್ರ­ಶೇಖರ್ (ಚಾಮರಾಜನಗರ) ಪ್ರಥಮ, ನರಸರಾಜಾಚಾರ್ (ಮಾಗಡಿ) ದ್ವಿತೀಯ, ಮಲ್ಲಿಕಾ–ರ್ಜುನ್‌­(ಮದ್ದೂರು) ತೃತೀಯ, ಸುರೇಶ್ (ರಾಮನಗರ), ಶ್ರೀನಿವಾಸ್ (ಬಿಡದಿ) ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು. ಕುಮಾರಿ ಹರ್ಷಿಣಿ ಅವರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ  ಹಾಲು ಮಹಾಮಂ­ಡಳಿಯ ಉಪನಿರ್ದೇಶಕ ಕೆ.ಎಸ್. ರಂಗೇ­ಗೌಡ, ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್‌  ಕಾರ್ಯದರ್ಶಿ ಡಾ.ಎಂ. ಬೈರೇಗೌಡ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಗೋಪಾಲ್, ಶ್ರೀ ಕೃಷ್ಣ ಸೇವಾ ಟ್ರಸ್ಟ್‌ ಅಧ್ಯಕ್ಷ ಕೃಷ್ಣಪ್ಪ, ರಂಗದರ್ಶನ ಪ್ರದರ್ಶನ ಕಲಾ ಕೇಂದ್ರದ ಅಧ್ಯಕ್ಷ ಎಂ. ಚನ್ನ­ಕೇಶವಮೂರ್ತಿ, ಪೌರಾಣಿಕ ರಂಗಗೀತ ಗಾಯನ ಸ್ಪರ್ಧೆ ಸಂಚಾಲಕ ಎಸ್. ರುದ್ರೇಶ್ವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT