ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಸಗೊಬ್ಬರ: ₹50 ಸಾವಿರ ಕೋಟಿ ಬಂಡವಾಳ

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ 500 ಎಕರೆ ಭೂಮಿ ನೀಡಲು ಹಾಗೂ ಶೇ 10 ಪಾಲು ಬಂಡವಾಳ ಹೂಡಲು ರಾಜ್ಯ ಸರ್ಕಾರ ಒಪ್ಪಿದೆ. ಆದಷ್ಟು ಬೇಗ ಭೂಮಿ ನೀಡಿದರೆ, ಕೇಂದ್ರ ಸರ್ಕಾರವು ₹50 ಸಾವಿರ ಕೋಟಿ ಬಂಡವಾಳ ಹೂಡಲಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್‌ ಕುಮಾರ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ­ಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ‘ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಆಂಡ್‌ ಟೆಕ್ನಾಲಜಿಯನ್ನು ಆರಂಭಿಸಲು ಕೇಂದ್ರ ಸಿದ್ಧತೆ ನಡೆಸಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆಯೂ ಮಾತುಕತೆ ನಡೆಸಿದ್ದೇನೆ.

ಈ ಸಂಸ್ಥೆ ಸ್ಥಾಪಿಸಲು ಬೇಕಾದ ಮೂಲ ಸೌಕರ್ಯ ಒದಗಿಸುವ ಬಗ್ಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ ಹಾಗೂ ಗುಜರಾತ್ ರಾಜ್ಯಗಳಿಂದ ಸಿಕ್ಕಿದಷ್ಟು ಸ್ಪಂದನೆ ನಮ್ಮ ರಾಜ್ಯದಿಂದ ಸಿಕ್ಕಿಲ್ಲ’ ಎಂದು ಅವರು ದೂರಿದರು.

ದುಬಾರಿ ಔಷಧಿ ಯಾಕೆ... ‘ಜೆನೆರಿಕ್‌’ ಓಕೆ
‘ಜೆನರಿಕ್‌ ಔಷಧಿ ಕೇಂದ್ರ­ ಆರಂ­ಭಿಸಲು ಕೇಂದ್ರದ ಜತೆ ಒಪ್ಪಂದ ಮಾಡಿ­­ಕೊಳ್ಳು­ವಂತೆ ಮುಖ್ಯ­ಮಂತ್ರಿಗೆ ಹಾಗೂ ಆರೋಗ್ಯ ಸಚಿವರಿಗೆ ಬರೆದಿ­ದ್ದೇನೆ. ಇನ್ನೂ ಉತ್ತರ ಬಂದಿಲ್ಲ. ದುಬಾರಿ ಬೆಲೆಗೆ ಔಷಧ ಮಾರುವ ಮಾಫಿ­ಯಾಕ್ಕೆ ಕಡಿ­ವಾಣ ಹಾಕಲು ಜೆನರಿಕ್‌ ಔಷಧಿ ಬಳಕೆಗೆ ಸೂಚಿಸು­ವಂತೆ ಸರ್ಕಾರ ಆದೇ­ಶಿ­ಸಬೇಕು’ ಎಂದು ಅನಂತಕುಮಾರ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT