ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಕೆಟ್‌’ಗೆ ಪುನೀತ್, ‘ಬುಲೆಟ್‌’ಗೆ ಶರಣ್ ಕಂಠ

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಪುನೀತ್ ರಾಜ್‌ಕುಮಾರ್ ಅವರ ಕಂಠಕ್ಕೆ ಭಾರಿ ಬೇಡಿಕೆ. ‘ಅಧ್ಯಕ್ಷ’, ‘ಪವರ್’, ‘ಕೃಷ್ಣಲೀಲಾ‘, ‘ಅಣ್ಣಬಾಂಡ್’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಗಾಯಕರಾಗಿ ಹಾಡುತ್ತಿರುವ ಪುನೀತ್ ಅವರು ಈಗ ನೀನಾಸಂ ಸತೀಶ್ ಅವರ ‘ರಾಕೆಟ್’ ಚಿತ್ರದ ‘ತಣ್ಣಗೆ ಇದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು. ಕನಸಲ್ಲಿ ಬಂದ್ರಿ ನೀವು ಹೂಗುಚ್ಛ ಹಿಡ್ಕಂಡು’ ಹಾಡಿಗೆ ಗಾನಬಜಾಯಿಸಿದ್ದಾರೆ. ‘ರಾಕೆಟ್’ ಸತೀಶ್ ಅವರ ಕನಸು–ಮನಸಿನ ಕೂಸು. ಇದಕ್ಕೆ ಪುನೀತ್ ಅವರನ್ನು ಹಾಡಿಸಬೇಕು ಎನ್ನುವುದು ಅವರ ಆಸೆಯೂ ಆಗಿತ್ತಂತೆ.

‘ಈ ಹಾಡಿಗೆ ಒಂದು ಎನರ್ಜಿ ಬೇಕಿತ್ತು. ಆ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಅವರನ್ನು ಹಾಡಿಸಿದೆ. ಒಮ್ಮೆ ಫೋನ್ ಮಾಡಿ ಅವರಿಗೆ ಈ ಬಗ್ಗೆ ಹೇಳಿದೆ. ಅವರಿಗೆ ಹಾಡನ್ನು ಕಳುಹಿಸಿಕೊಟ್ಟೆ’ ಎನ್ನುವರು ಸತೀಶ್. ಅಂದಹಾಗೆ ಬಾಲ್ಯದಿಂದಲೂ ಪುನೀತ್ ಹಾಡಿರುವ ‘ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು’ ಮತ್ತು ‘ಬಿಸಿಲೇ ಇರಲಿ ಮಳೆಯೇ ಇರಲಿ’ ಹಾಡು ಸತೀಶ್‌ಗೆ ಪಂಚಪ್ರಾಣವಂತೆ. ‘ರಾಕೆಟ್‌’ಮೇಲಿನ ಪ್ರೀತಿ ಮತ್ತು ಅದನ್ನು ಚೆಂದವಾಗಿ ಉಡಾಯಿಸಲು ಸತೀಶ್ ಮತ್ತೇನೇನು ಮಾಡುತ್ತಾರೋ ಕಾಯ್ದುನೋಡಬೇಕು.

ಕಾಲ್ ಕೇಜಿ ಕಡ್ಲೆಕಾಯ್...
ನಾಯಕ ಕಮ್ ಗಾಯಕ; ಹೀಗೆ ಎರಡೆರಡು ಹೊಣೆ ನಿಭಾಯಿಸುವವರ ಸಾಲಿಗೆ ಶರಣ್ ಕೂಡ ಬಡ್ತಿ ಪಡೆದಿದ್ದಾರೆ. ತಮ್ಮದೇ ಅಭಿನಯದ ‘ರಾಜರಾಜೇಂದ್ರ’ ಚಿತ್ರಕ್ಕೆ ‘ಮಧ್ಯಾಹ್ನ ಕನಸಿನಲ್ಲಿ ಐದ್ ನಿಮಿಷ ಬಂದ್ಬುಡ್ತೀನಿ’ ಹಾಡನ್ನು ಹಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದ್ದರು. ಇದೀಗ ಮತ್ತೊಮ್ಮೆ ಅಂಥದ್ದೇ ಪ್ರಯತ್ನ ಮುಂದಾಗಿರುವ ಶರಣ್ ತಮ್ಮ ನಾಯಕತ್ವದ ‘ಬುಲೆಟ್ ಬಸ್ಯಾ’ ಚಿತ್ರಕ್ಕೂ ಒಂದು ಹಾಡನ್ನು ಗುನುಗಿದ್ದಾರೆ.

ಜಯತೀರ್ಥ ನಿರ್ದೇಶನದ ‘ಬುಲೆಟ್ ಬಸ್ಯಾ’ ಚಿತ್ರಕ್ಕಾಗಿ ಯೋಗರಾಜ್‌ಭಟ್ ಅವರು ಬರೆದಿರುವ ‘ಕಾಲ್ ಕೇಜಿ ಕಡ್ಲೆಕಾಯ್ ಮೇಯ್ತಾ ಇದ್ದೆ...’ ಎಂಬ ಹಾಡಿಗೆ ಶರಣ್ ದನಿಯಾಗಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರ ಸ್ಟುಡಿಯೊದಲ್ಲಿ ಇತ್ತೀಚೆಗೆ ಹಾಡಿನ ಧ್ವನಿ ಮುದ್ರಣ ಮಾಡಿಕೊಳ್ಳಲಾಯಿತು. ‘ರಾಜರಾಜೇಂದ್ರ’ದಲ್ಲೂ ಯೋಗರಾಜ್ ಭಟ್ ಸಾಹಿತ್ಯವನ್ನೇ ಹಾಡಿದ್ದರು. ಹಾಸ್ಯ ನಟನಾಗಿ ಬಂದು, ನಾಯಕನಾಗಿ, ಗಾಯಕನಾಗಿ ಬೆಳೆಯುತ್ತಿರುವ ಶರಣ್ ಇನ್ನೂ ಯಾವೆಲ್ಲ ‘ಪಾತ್ರ’ಗಳನ್ನು ನಿರ್ವಹಿಸಲಿದ್ದಾರೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT