ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಕ್‌ ಆನ್ 2’ಗೆ ಶ್ರದ್ಧಾ ಗಾಯನ

Last Updated 26 ಜುಲೈ 2015, 19:30 IST
ಅಕ್ಷರ ಗಾತ್ರ

‘ಏಕ್‌ ವಿಲನ್‌’ ಚಿತ್ರದಲ್ಲಿ ‘ಗಲಿಯಾ ತೇರಿ ಗಲಿಯಾ’ ಹಾಗೂ ಇತ್ತೀಚಿನ ‘ಬೇಜುಬಾ ಕಬ್‌ ಸೇ’ ಹಾಡುಗಳನ್ನು ಹಾಡಿದ್ದ ನಟಿ ಶ್ರದ್ಧಾ ಕಪೂರ್, ಹೊಸಚಿತ್ರ ‘ರಾಕ್‌ ಆನ್ 2’ನಲ್ಲಿ  ಮತ್ತೆ ಹಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಶಂಕರ್‌– ಎಹ್ಸಾನ್‌– ಲಾಯ್‌ ಅವರು ಸಂಗೀತ ನೀಡಿದ್ದಾರೆ. 

‘ನಾನು ವೃತ್ತಿಪರ ಹಾಡುಗಾರಳಲ್ಲ. ಹಾಡು ಹಾಡುವುದೆಂದರೆ ನನಗೆ ತುಂಬ ಇಷ್ಟ’ ಎಂದು ಹೇಳಿರುವ ಶ್ರದ್ಧಾ ಮುಂದಿನ ಚಿತ್ರಗಳಲ್ಲಿ ಇನ್ನಷ್ಟು ಮಧುರವಾಗಿ ಹಾಡುವ ಭರವಸೆಯನ್ನೂ ನೀಡಿದ್ದಾರೆ.

‘ರಾಕ್‌ ಆನ್‌ 2’ ಚಿತ್ರದಲ್ಲಿ ಶ್ರದ್ಧಾ ಅವರು ನಟ, ಗಾಯಕ ಫರ್ಹಾನ್‌ ಅಖ್ತರ್‌ ಅವರೊಂದಿಗೆ ನಟಿಸುತ್ತಿದ್ದಾರೆ. ‘ಫರ್ಹಾನ್‌ ಅವರೊಂದಿಗೆ ಅಭಿನಯಿಸಿದ್ದು ನನಗೆ ಖುಷಿ ನೀಡಿದೆ ಮತ್ತು ಒಳ್ಳೆ ಅನುಭವ ದಕ್ಕಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT