ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಅಸ್ತ್ರ’ವಾದ ಸಿಬಿಐ: ಮಮತಾ ವಾಗ್ದಾಳಿ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎನ್‌ಡಿಎ ಸರ್ಕಾ­ರವು ಸಿಬಿಐಯನ್ನು ‘ರಾಜಕೀಯ ಅಸ್ತ್ರ’­ವಾಗಿ ಬಳಸುತ್ತಿದೆ ಮತ್ತು ಸಿಬಿಐಯು ಪ್ರಧಾನಿ ಕಚೇರಿಯ (ಪಿಎಂಒ) ಒಂದು ಇಲಾಖೆ­ಯಂತೆ ಕೆಲಸ ಮಾಡು­ತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯ­ಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.
ತೃಣಮೂಲ ಕಾಂಗ್ರೆಸ್‌ (ಟಿಎಂಸಿ)  ಪಕ್ಷದ ನಾಯಕಿಯೂ ಆಗಿರುವ ಅವರು ಗುರುವಾರ ಸಂಸತ್‌ ಭವನದ ಹೊರ­ಗಡೆ ಸುದ್ದಿ­ಗಾರರ ಜೊತೆ ಮಾತ­ನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾ­ರ­ದ ವಿರುದ್ಧ ವಾಗ್ದಾಳಿ ನಡೆಸಿದರು.

‘ಟಿಎಂಸಿ ಬುಡಮೇಲು ಮಾಡಲು ಯತ್ನಿಸಿರುವ ಬಿಜೆಪಿ ವಿರುದ್ಧ ನಾವೊ­ಬ್ಬರೇ ಏಕಾಂಗಿಯಾಗಿ ಹೋರಾ­ಡು­ತ್ತಿ­ದ್ದೇವೆ. ರಾಜ್ಯದ ಸಾರಿಗೆ ಸಚಿವ ಮದನ್‌ ಮಿತ್ರಾ ಅವರ ಬಂಧ­ನವು ರಾಜ­ಕೀಯ ಪ್ರೇರಿತ. ನಮ್ಮ ಬಗ್ಗೆ ಬಿಜೆಪಿ ಅಸೂಯೆ ಹೊಂದಿದೆ. ಆದರೆ ಪ್ರಜಾ­ಪ್ರಭುತ್ವವನ್ನು ಬುಡಮೇಲು ಮಾಡ­ಲಾಗದು ಅಥವಾ ಹೇರಲಾಗದು’ ಎಂದು ಹೇಳಿದರು.

‘ಬಿಜೆಪಿ ತೋರುತ್ತಿರುವ ಮನೋಭಾವ ಸರ್ವಾಧಿಕಾರದ್ದು. ಟಿಎಂಸಿ ಯಾವುದೇ ಒತ್ತಡಕ್ಕೆ ಮಣಿ­ಯದು. ದೇಶದ ಜನತೆಗೆ ಮಾತ್ರ ತಲೆ ಬಾಗುತ್ತದೆ. ಇದು ರಾಜಕೀಯ ಹೋರಾ­­ಟ. ಪಕ್ಷವು ರಾಜಕೀಯವಾಗಿ ಮತ್ತು ಪ್ರಜಾಸತ್ತಾ­ತ್ಮಕ­ವಾಗಿ ಹೋರಾ­ಡುತ್ತದೆ. ನೀವು, ನಮ್ಮ ಧ್ವನಿಯನ್ನು ನಿಲ್ಲಿಸಲಾಗದು’ ಎಂದರು.

‘ಶಾರದಾ ಚಿಟ್‌ಫಂಡ್‌ ಹಗರಣ­ದಲ್ಲಿ ನಮ್ಮ ಪಕ್ಷದ ಪಾತ್ರವಿಲ್ಲ ಮತ್ತು ಇದು ನಮ್ಮ ಸರ್ಕಾರದ ಅವಧಿಯಲ್ಲಿ ನಡೆ­ದಿಲ್ಲ’ ಎಂದ ಅವರು, ‘ಸಿಬಿಐ ತನಿಖೆಗೆ ಹಲವು ಪ್ರಕರಣಗಳಿದ್ದರೂ, ಯಾವುದ­ರಲ್ಲೂ ಫಲಿತಾಂಶ ಬಂದಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT