ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮ್ ಲಖನ್’ ಮರುಸೃಷ್ಟಿ

Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅನಿಲ್‌ ಕಪೂರ್‌ ಹಾಗೂ ಜಾಕಿ ಶ್ರಾಫ್‌ ಅಭಿನಯದ ಸೂಪರ್‌ ಹಿಟ್‌ ಹಿಂದಿ ಸಿನಿಮಾ ‘ರಾಮ್‌ ಲಖನ್‌’ ಅನ್ನು ರೀಮೇಕ್‌ ಮಾಡಲು ನಿರ್ಮಾಪಕ ಕರಣ್‌ ಜೋಹರ್‌ ನಿರ್ಧರಿಸಿದ್ದಾರೆ.  

ಕರಣ್‌ ಜೋಹರ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ರೋಹಿತ್‌ ಶೆಟ್ಟಿ ನಿರ್ದೇಶನ ಮಾಡಲಿದ್ದು, 2016ರ ವೇಳೆಗೆ ಚಿತ್ರ ತೆರೆ ಕಾಣಲಿದೆ.

ರೋಹಿತ್ ಶೆಟ್ಟಿ, ಧರ್ಮ ಪ್ರೊಡಕ್ಷನ್ಸ್‌ ಮತ್ತು ಮುಕ್ತ ಆರ್ಟ್ಸ್‌ ನಿರ್ಮಾಣ ಸಂಸ್ಥೆಗಳು ‘ರಾಮ್‌ ಲಖನ್‌’ ಚಿತ್ರದ ರೀಮೇಕ್‌ ಅನ್ನು ನಿರ್ಮಿಸಲಿವೆ ಎಂದು ಕರಣ್‌ ಜೋಹರ್‌ ಟ್ವೀಟ್‌ ಮಾಡಿದ್ದಾರೆ.

ಜಾಕಿ ಶ್ರಾಫ್‌ ಹಾಗೂ ಅನಿಲ್‌ ಕಪೂರ್‌ ಅಭಿನಿಯಿಸಿರುವ ಪಾತ್ರಗಳಿಗೆ ಯಾರನ್ನು ಆಯ್ಕೆ ಮಾಡಲಾಗಿದೆ ಎನ್ನುವುದನ್ನು ಇನ್ನೂ ಗುಟ್ಟಾಗಿ ಇಡಲಾಗಿದೆ. ಆದರೆ ‘ಸ್ಟೂಡೆಂಟ್‌ ಆಫ್‌ ದ ಇಯರ್’ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದ ವರುಣ್‌ ಧವನ್‌ ಮತ್ತು ಸಿದ್ಧಾರ್ಥ್‌ ಮಲ್ಹೋತ್ರ ಜೋಡಿಯನ್ನು ಕರಣ್‌ ಜೋಹರ್‌ ಮತ್ತೆ ಈ ಚಿತ್ರದಲ್ಲಿ ಪರಿಚಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

1989ರಲ್ಲಿ ಸುಭಾಷ್‌ ಘಾಯ್‌ ನಿರ್ದೇಶನದಲ್ಲಿ ತೆರೆಗೆ ಬಂದಿದ್ದ ‘ರಾಮ್‌ ಲಖನ್‌’ ಚಿತ್ರದಲ್ಲಿ ಅನಿಲ್‌ ಕಪೂರ್‌ಗೆ ನಟಿ ಮಾಧುರಿ ದೀಕ್ಷಿತ್ ಜೋಡಿಯಾಗಿದ್ದರು. ಜಾಕಿ ಶ್ರಾಫ್‌ ಹಾಗೂ ಡಿಂಪಲ್‌ ಕಪಾಡಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅಣ್ಣನ ಪಾತ್ರದಲ್ಲಿ ಜಾಕಿ ಅಭಿನಯಿಸಿದ್ದರೆ, ಪುಂಡ ರೌಡಿಯ ಸೋಗಿನಲ್ಲಿರುವ ಪೊಲೀಸ್‌ ಅಧಿಕಾರಿಯಾಗಿ ಅನಿಲ್‌ ಪ್ರೇಕ್ಷಕರ ಮನ ಗೆದ್ದಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT