ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರನ್ನು ತಲುಪದ ಕೃಷಿ ಯೋಜನೆ’

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರನ್ನು ಎರಡನೇ ದರ್ಜೆಯ ನಾಗರಿಕರಂತೆ ಕಾಣ ಲಾಗುತ್ತಿದ್ದು, ಯಾವುದೇ ಯೋಜನೆ ಗಳು ಅವರನ್ನು ತಲುಪುತ್ತಿಲ್ಲ’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ಮಾಜಿ ನಿರ್ದೇಶಕ ಡಾ.ಆರ್.ಎಸ್‌. ದೇಶಪಾಂಡೆ ಹೇಳಿದರು.

ನಗರದಲ್ಲಿ ಗುರುವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಏರ್ಪಡಿಸಿದ್ದ ‘ಕೃಷಿ ಮತ್ತು ಮಾಧ್ಯಮ’ ವಿಚಾರ ಗೋಷ್ಠಿ ಯಲ್ಲಿ ಅವರು ಮಾತನಾ ಡಿದರು.

‘ಸರ್ಕಾರ ಸೂಕ್ತ ಸೌಲಭ್ಯಗಳನ್ನು ನೀಡದ ಕಾರಣ 1991 ರಿಂದ ಇಲ್ಲಿಯವರೆಗೆ ದೇಶದಲ್ಲಿ ಸುಮಾರು 56 ಲಕ್ಷ ರೈತರು ಕೃಷಿಯನ್ನು ತೊರೆದಿದ್ದಾರೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

‘ರೈತರು ಕಾರ್ಮಿಕರಾಗಿ ಬದ ಲಾಗುವ ಪ್ರವೃತ್ತಿ ಹೆಚ್ಚಿದ್ದು ದೇಶದಲ್ಲಿ 12 ಲಕ್ಷ ಎಕರೆ ಭೂಮಿ ಕೃಷಿ ಮಾಡದೆ ನಿರುಪಯುಕ್ತವಾಗಿದೆ ಎಂದು ಹೇಳಿದರು.

ಪ್ರಗತಿಪರ ಕೃಷಿಕ ಡಾ.ಮಲ್ಲಣ್ಣ ನಾಗರಾಳ್‌ ಮಾತನಾಡಿ ‘ವಿಜ್ಞಾನಿಗಳು ಮತ್ತು ಮಾಧ್ಯಮಗಳು ರೈತರ ಪರ ವಾಗಿ ಕಾರ್ಯನಿರ್ವಹಿಸಬೇಕು. 15 ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಕೃಷಿ, ರೈತರ ಸಮಸ್ಯೆಗಳ ಕುರಿತ ಲೇಖನಗಳು ವರ್ಷಕ್ಕೆ 150ಕ್ಕೂ ಹೆಚ್ಚು ಪ್ರಕಟವಾಗು ತ್ತಿದ್ದವು. ಈಗ ಅದರ ಪ್ರಮಾಣ ಕಡಿಮೆ ಆಗಿದೆ’ ಎಂದು ಹೇಳಿದರು.

ವಾರ್ತಾ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ‘ದೇಶಕ್ಕೆ ಬೆನ್ನೆಲುಬಾಗಿರುವ ರೈತರಿಗೆ ಮಾಧ್ಯಮ ಗಳು ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕೃಷಿ ಆಯೋಗದ ಮಾಜಿ ಅಧ್ಯಕ್ಷ ಡಾ. ಎಸ್‌.ಎ. ಪಾಟೀಲ್‌ ವಹಿಸಿ ದ್ದರು. ರಾಜ್ಯ ಕಬ್ಬು ಬೆಳೆಗಾರರ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಪ್ರಗತಿ ಪರ ಕೃಷಿಕ ಈರಯ್ಯ ಖಿಲ್ಲೇದಾರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT