ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಚಳವಳಿಯ ಗುರಿ – ಪರ್ಯಾಯ ಸಂಸ್ಕೃತಿ’ ಚಿಂತನ ಸಮಾವೇಶ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತು– ಇವರೆಡೂ ಸಂಸ್ಥೆಗಳೂ ಸೇರಿ ‘ಹನ್ನೆರಡನೆಯ ಶತಮಾನದ ವಚನ ಚಳವಳಿಯ ಗುರಿ– ಪರ್ಯಾಯ ಸಂಸ್ಕೃತಿ’ ಎಂಬ ವಿಷಯವನ್ನು ಕುರಿತು ಚಿಂತನ ಸಮಾವೇಶವನ್ನು ಏರ್ಪಡಿಸಿವೆ. ಮೂರು ದಿನಗಳ ಈ ಸಮಾವೇಶದ ಉದ್ಘಾಟನೆ ಇಂದು (ಶುಕ್ರವಾರ) ನಡೆಯಲಿದೆ.

ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಚಳವಳಿ ಅಂದಿನ ಧಾರ್ಮಿಕ ವ್ಯವಸ್ಥೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಶೋಷಣೆಯ ಎಲ್ಲ ಸಂಗತಿಗಳನ್ನು ನಿರಾಕರಿಸಿದೆ. ಸಮಾಜದ ಮುನ್ನಡೆಗೆ ಕಾರಣರಾದ ಕಾಯಕಜೀವಿಗಳನ್ನು ಸಂಘಟಿಸಿ ಅವರ ಒಡಲಾಳದ ದನಿಗೆ ಅವಕಾಶ ಕೊಟ್ಟಿದೆ.  ಶ್ರಮಸಂಸ್ಕೃತಿಯ ನೆಲೆಗಟ್ಟಿನಲ್ಲಿ ‘ಪರ್ಯಾಯ ಸಂಸ್ಕೃತಿ’ಯ ಪರಿಕಲ್ಪನೆಯನ್ನು ಮುಂದಿಟ್ಟಿದೆ. ಜಗತ್ತಿನ ಇತಿಹಾಸದಲ್ಲಿ ವಿಶಿಷ್ಟವೆನಿಸುವ ವಚನ ಚಳವಳಿಯ ಆಶಯಗಳು ಮತ್ತು ಆಯಾಮಗಳನ್ನು ಕುರಿತು ಮುಕ್ತ ಸಂವಾದ ನಡೆಸುವುದು ಈ ಚಿಂತನ ಸಮಾವೇಶದ ಮುಖ್ಯ ಉದ್ದೇಶ.

ವಚನ ಚಳವಳಿಯನ್ನು ವಿವಿಧ ನೆಲೆಗಳಲ್ಲಿ ಅಧ್ಯಯನ ಮಾಡಿರುವ ರಾಜ್ಯದ ನೂರಾರು ವಿದ್ವಾಂಸರು ಮತ್ತು ಚಿಂತಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆಸಕ್ತ ಸಾರ್ವಜನಿಕರೂ ಸಂವಾದದಲ್ಲಿ ಪಾಲ್ಗೊಳ್ಳಬಹುದಾಗಿದೆ. ಮೂರು ದಿನ ಏಳು ಗೋಷ್ಠಿಗಳಲ್ಲಿ ವಿವಿಧ ವಿಷಯಗಳು ಚರ್ಚಿತವಾಗಲಿದ್ದು, ಭಾನುವಾರ ಸಮಾರೋಪ ನಡೆಯಲಿದೆ. ಚಿಂತನ ಸಮಾವೇಶವನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪ್ರಸಿದ್ಧ ವಿದ್ವಾಂಸರಾದ ಡಾ.ಎಂ.ಎಂ. ಕಲಬುರ್ಗಿ ಉದ್ಘಾಟಿಸಲಿದ್ದಾರೆ. ಡಾ.ಪಿ.ವಿ. ನಾರಾಯಣ ಮುಖ್ಯ ಅತಿಥಿಯಾಗಿದ್ದು, ಡಾ.ಸಿ. ವೀರಣ್ಣ ಆಶಯ ನುಡಿ ಮುಂದಿಡಲಿದ್ದಾರೆ. ಅಧ್ಯಕ್ಷತೆ: ಗೊ.ರು. ಚನ್ನಬಸಪ್ಪ.

ಗೋಷ್ಠಿ–1: ವಚನ ಚಳವಳಿಯ ಇತಿಹಾಸ ಮತ್ತು ಆಶಯ– ವಿಷಯ ಮಂಡನೆ: ಡಾ. ರಾಜೇಂದ್ರ ಚೆನ್ನಿ. ಸಹಚಿಂತನೆ: ಡಾ.ಎಚ್.ಎಸ್. ಗೋಪಾಲರಾವ್, ಡಾ. ಅಲ್ಲಮಪ್ರಭು ಬೆಟ್ಟದೂರ, ಡಾ. ಶ್ರೀಕಂಠ ಕೂಡಿಗೆ, ಡಾ. ವಿಜಯಶ್ರೀ ಸಬರದ. 11.45ಕ್ಕೆ. 

ಗೋಷ್ಠಿ– 2: ದೇವರು, ದೇವಾಲಯ ಮತ್ತು ಮಠಗಳ ನಿರಾಕರಣೆ– ವಿಷಯ ಮಂಡನೆ: ಪ್ರೊ. ಕೆ.ಎಸ್. ಭಗವಾನ್. ಸಹಚಿಂತನೆ: ಡಾ. ವೀರಣ್ಣ ದಂಡೆ, ಡಾ.ಎಲ್. ಹನುಮಂತಯ್ಯ, ಡಾ. ಪ್ರೀತಿ ಶುಭಚಂದ್ರ, ಡಾ. ಮೀರಾಸಾಬಿಹಳ್ಳಿ ಶಿವಣ್ಣ. ಮಧ್ಯಾಹ್ನ 3 ಕ್ಕೆ.
ಸ್ಥಳ:  ಶ್ರೀ ಶಿವರಾತ್ರೀಶ್ವರ ಕೇಂದ್ರ (ಜೆಎಸ್ಎಸ್ ಸಭಾಭವನ) 1 ನೇ ಮುಖ್ಯ ರಸ್ತೆ, 8ನೇ ಬ್ಲಾಕ್ ಜಯನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT