ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಜಾಗೊಂಡ ನೌಕರರನ್ನು ಪುನಃ ಕರೆಯಿಸಿಕೊಳ್ಳಿ’

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲಸದಿಂದ ವಜಾ ಮಾಡಿರುವ ‘108 ಆರೋಗ್ಯ ಕವಚ’ ವಾಹನಗಳ ನೌಕರರನ್ನು ಒಂದುವಾರದೊಳಗೆ ಪುನಃ ಕೆಲಸಕ್ಕೆ ಕರೆಯಿಸಿಕೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ಸಮತಾ  ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಎಚ್ಚರಿಸಿದರು.

‘ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ವಜಾಗೊಂಡ ಸಿಬ್ಬಂದಿಯೊಂದಿಗೆ ನಡೆಸಿದ ಸಂಧಾನದ ಫಲವಾಗಿ ಎಲ್ಲಾ ನೌಕರರು ಕೆಲಸಕ್ಕೆ ಸಜ್ಜಾಗಿದ್ದಾರೆ. ಆದರೆ, ಜಿವಿಕೆ ಸಂಸ್ಥೆ ಮುಖ್ಯಸ್ಥರು ಕರ್ತವ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರಿಗೆ ಸಾಕಷ್ಟು ಬಾರಿ ಮನವಿ ಕೊಟ್ಟರೂ ಅವರು ಗಮನ ಹರಿಸಲಿಲ್ಲ’ ಎಂದರು.

‘ಇತ್ತೀಚೆಗೆ ಮುಷ್ಕರ ನಡೆಸಿದ ಸಿಬ್ಬಂದಿಯನ್ನು ನೂರಾರು ಕಿ.ಮೀ ದೂರದ ಜಿಲ್ಲೆಗಳಿಗೆ ಹೋಗಲು ಹೇಳಿ ಕಿರುಕುಳ ನೀಡುತ್ತಿದ್ದಾರೆ. ಜಿವಿಕೆ ಸಂಸ್ಥೆಯಲ್ಲಿರುವ ಸಚಿವ ಖಾದರ್‌ ಅವರ ಹತ್ತಿರದ ಸಂಬಂಧಿ ಪರ್ವೇಜ್ ಎಂಬುವರು ನೌಕರರ ಹಿತಾಸಕ್ತಿ ಕಡೆಗಣಿಸಿ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

* ಒಂದು ವೇಳೆ ವಜಾಗೊಂಡ ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿ ಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸಿ, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ರಾಜೀನಾಮೆ ನೀಡುವವರೆಗೂ ಬಿಡುವುದಿಲ್ಲ.

-ವೆಂಕಟಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT