ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶಾಲ ಮನೋಭಾವದಿಂದ ಅಭಿವೃದ್ಧಿ’

Last Updated 25 ಏಪ್ರಿಲ್ 2014, 6:07 IST
ಅಕ್ಷರ ಗಾತ್ರ

ಮುಂಡರಗಿ: ಮನುಷ್ಯರಲ್ಲಿ ವಿಶಾಲ ಮನೋ­­­ಭಾವನೆ ಮೂಡಿದಾಗ ಮಾತ್ರ ಸಮಾಜ ಸಮಗ್ರವಾಗಿ ಅಭಿವೃದ್ಧಿ ಹೊಂದು­ತ್ತದೆ. ಅಸಂಘಟಿತರಾಗಿರುವ ಸಮಾಜ ಬಾಂಧವರೆಲ್ಲ ಒಂದಾಗಿ ಸಮಾಜದ ಒಳಿತಿಗಾಗಿ ಪ್ರಾಮಾ­ಣಿಕ­ವಾಗಿ ಶ್ರಮಿಸಬೇಕಿದೆ ಎಂದು ಅನ್ನ­ದಾನ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಹೇಳಿದರು.

ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘವು ತಾಲ್ಲೂಕಿನ ಡೋಣಿ ಗ್ರಾಮದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರ­ದಲ್ಲಿ ಏರ್ಪಡಿಸಿದ್ದ ಸಮಾಜ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ರಾಜ್ಯ ಮತ್ತು ದೇಶವನ್ನಾಳಿದ ವಿವಿಧ ಪಕ್ಷಗಳು ಹಡಪದ ಸಮಾಜದ ಅಭಿ­ವೃದ್ಧಿಯನ್ನು ಸಂಪೂರ್ಣವಾಗಿ ಕಡೆ­ಗಣಿ­ಸಿದ್ದು, ನಮ್ಮ ಹಕ್ಕುಗಳಿಗಾಗಿ ನಾವೆಲ್ಲ ಹೋರಾಟ ಕೈಗೊಳ್ಳಬೇಕಾಗಿದೆ. ಈ ನೆಲದಲ್ಲಿ ಹುಟ್ಟಿ ಬೆಳೆದ ನಮ್ಮ ಮಕ್ಕಳಿಗೆ ಸರಕಾರದ ಸೌಲಭ್ಯಗಳು ಸಮ­ರ್ಪಕವಾಗಿ ದೊರೆಯುತ್ತಿಲ್ಲ. ಅದನ್ನು ನಿವಾರಿಸುವ ನಿಟ್ಟನಲ್ಲಿ ನಾವೆಲ್ಲ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡ­ಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ಡೋಣಿಯ ನಂದಿವೇರಿ ಮಠದ ಶಿವುಕುಮಾರ ಸ್ವಾಮಿಜಿ ಅವರು ಮಾತ­ನಾಡಿ, ಹಡಪದ ಅಪ್ಪಣ್ಣನವರು ನೂರಾರು ವಚನಗಳನ್ನು ರಚಿಸಿ ವಚನ ಸಾಹಿತ್ಯ­ವನ್ನು ಶ್ರೀಮಂತಗೊಳಿಸಿದ್ದಾರೆ. ಬಸವಣ್ಣನ ಆಪ್ತ ಕಾರ್ಯದರ್ಶಿಯಾಗಿ ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಸಮಾಜ ಸೇವೆ ಮಾಡಿದ್ದಾರೆ. ಹಡಪದ ಸಮಾಜ­ದವರು ತಮ್ಮ ಕಿಳರಿಮೇಯನ್ನು ಬದಿಗೊತ್ತಿ ಸಮಾಜದಲ್ಲಿ ಎತ್ತರದ ಸ್ಥಾನಗಳನ್ನು ಗಳಿಸಿದಾಗ ಮಾತ್ರ ಸಮಾಜವು ತಾನಾಗಿಯೇ ಉದ್ಧಾರ­ವಾಗುತ್ತದೆ ಎಂದು ತಿಳಿಸಿದರು.

ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ದೇವು ಹಡಪದ ಮಾತನಾಡಿ, ಸಮಾಜ ಬಾಂಧವರೆಲ್ಲ  ಪರಿಶುದ್ಧ ಕಾಯಕದಿಂದ ಚಾರಿತ್ರ್ಯ­ವಂತ­ರಾಗಿ ಬಾಳಬೇಕು. ಸಮಾಜ ಬಾಂಧ­ವರು ಆಂತರಿಕ ಕಲಹಗಳನ್ನು ಬದಿಗೊತ್ತಿ ಸಮಾಜದ ಹಿತ ಕಾಯ­ಬೇಕು. ಕಾಯಕ, ಸಹಕಾರ ಮತ್ತು ಪ್ರೀತಿಯಿಂದ ಜಗತ್ತನ್ನೇ ಜಯಿಸ­ಬಹುದು. ಆದ್ದರಿಂದ ಹಡಪದ ಸಮಾ­ಜದ ಪ್ರತಿಯೊಬ್ಬರು ಕಾಯಕ ಯೋಗಿ­ಗಳಾ­ಗಬೇಕು ಎಂದು ತಿಳಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ವ್ಹಿ.ಬಿ.ಕೊಣ್ಣೂರ ಮಾತನಾಡಿ, ಸಮಾಜದ ಪ್ರಗತಿಗಾಗಿ ಪ್ರಾಮಾ­ಣಿಕವಾಗಿ ಕೆಲಸ ಮಾಡಲು ತಾವು ಸದಾ ಸಿದ್ಧರಿದ್ದು, ಸಮಾಜದ ಹಿರಿಯರು ಸೂಕ್ತ ಮಾರ್ಗದರ್ಶನ ಮಾಡಬೇಕು. ವಚನದ ಮಹತ್ವವನ್ನು ಅರಿಯಲು ಸಮಾಜದ ಪ್ರತಿಯೊಬ್ಬರ ಮನೆಯಲ್ಲಿ ವಚನಗೋಷ್ಠಿ ನಡೆಸಲು ಚಿಂತನೆ ನಡೆಡಸಿದ್ದು, ಸದ್ಯದಲ್ಲಿಯೇ ಅದನ್ನು ಕಾರ್ಯ­ರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. ಎ. ವ್ಹಿ. ಪ್ರಭು ಮಾತ­ನಾಡಿದರು.

ಶ್ರೀನಿವಾಸ ಹಡಪದ, ಕಲ್ಲೇಶಪ್ಪ ಕೂಡಗುಂಟಿ, ನಾಗರಾಜ ಡಂಬಳ, ಪರಶುರಾಮ ಹಡಪದ, ಮಂಜುನಾಥ ಹಡಪದ, ಶೇಖರಪ್ಪ ಹಡಪದ, ಸೋಮಣ್ಣ ಹಡಪದ, ವೀರಣ್ಣ ಹಡಪದ, ಮಲ್ಲಿಕಾರ್ಜುನ ಹಡಪದ, ಬಸವರಾಜ ಹಡಪದ, ಡಿ.ಬಿ ಹಳ್ಳಿಕೇರಿ, ಬಸನಗೌಡ ಪಾಟೀಲ್, ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ದೊಡ್ಡಮನಿ, ಕರ್ಜಗಿ ಗ್ರಾ.ಪಂ.ಅಧ್ಯಕ್ಷ  ಶಿವುಕುಮಾರ ಕಾಯಕದ ಮೊದಲಾದವರು ಹಾಜ­ರಿದ್ದರು.

ಸಂಗೀತಾ ಹಡಪದ ಪ್ರಾರ್ಥನೆ ಹಾಡಿದರು. ಶೇಖಪ್ಪ ಮುಂಡವಾಡ ಸರ್ವರನ್ನು ಸ್ವಾಗತಿಸಿದರು. ಗೌರಿ ಹಡ­ಪದ ಕಾರ್ಯಕ್ರಮ ನಿರೂಪಿಸಿದರು. ಕಲ್ಲಪ್ಪ ಹಡಪದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT