ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶಾಲ ವ್ಯಾಪ್ತಿ’ ಯೋಜನೆ ಜಾರಿಗೆ ರಾಜ್ಯದ ಒಪ್ಪಿಗೆ

Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಕಾರ್ಮಿಕ ಸಚಿವಾಲಯದ ‘ವಿಶಾಲ ವ್ಯಾಪ್ತಿ’ ವೈದ್ಯ­ಕೀಯ ಸೌಲಭ್ಯ ಯೋಜನೆಯನ್ನು ಕರ್ನಾ­ಟಕ ಮತ್ತು ಛತ್ತೀಸಗಡ ರಾಜ್ಯಗಳು ಜಾರಿ ಮಾಡಲು ಒಪ್ಪಿಕೊಂಡಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ಸೋಮವಾರ ಲೋಕಸಭೆಗೆ ತಿಳಿಸಿದರು.

ಇಎಸ್ಐ ಸೌಲಭ್ಯವನ್ನು ನೀಡ­ಲಾಗದ ಕಾರ್ಮಿಕರ ಅನುಕೂಲ­ಕ್ಕಾಗಿ ಕೇಂದ್ರ ಸರ್ಕಾರ  ‘ವಿಶಾಲ ವ್ಯಾಪ್ತಿ’ ವೈದ್ಯ­ಕೀಯ ಯೋಜನೆ­ಯನ್ನು ರೂಪಿ­ಸಿದ್ದು, ಇದನ್ನು ಜಾರಿ ಮಾಡುವ ಬಗ್ಗೆ ಎಲ್ಲಾ ರಾಜ್ಯಗಳ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ರಾಜ್ಯಗಳು ಈ ಯೋಜನೆಯನ್ನು ಜಾರಿ ಮಾಡಿದರೆ ವೆಚ್ಚ ಭರಿಸಬೇಕಾಗಿ­ರುವುದರಿಂದ ರಾಜ್ಯ ಸರ್ಕಾರಗಳು ಒಪ್ಪಿದರೆ ಮಾತ್ರ ಈ ಯೋಜನೆಯನ್ನು ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಮತ್ತು ಛತ್ತೀಸಗಡ ಸರ್ಕಾರ­ಗಳು ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತಲಾ ಎರಡು ರಂಗಗಳನ್ನು ಗುರುತಿ­ಸಿವೆ ಎಂದೂ ಅವರು ತಿಳಿಸಿದ್ದಾರೆ.

ಇಎಸ್ಐ ಆಸ್ಪತ್ರೆ ತೆರೆಯಲು ಅಗತ್ಯ­ವಾದ ಕಾರ್ಮಿಕರ ಸಂಖ್ಯೆ ಇರದ ಪ್ರದೇಶ­ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಕಾರ್ಮಿಕರಿಗೆ ಕನಿಷ್ಠ ವೈದ್ಯ­ಕೀಯ ನೆರವು ನೀಡುವುದು ‘ವಿಶಾಲ ವ್ಯಾಪ್ತಿ’ ಯೋಜನೆಯ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT