ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವ ಚಿಂತಕರ’ ಪಟ್ಟಿ: ಮೋದಿ, ಅಮಿತ್‌ ಷಾ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ವಿದೇಶಾಂಗ ನೀತಿ ನಿಯತಕಾಲಿಕವೊಂದು  ‘ವಿಶ್ವದ ೧೦೦ ಚಿಂತಕರ’ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿರ್ಣಯ ತೆಗೆದುಕೊಳ್ಳುವ ಪ್ರಮುಖ ವ್ಯಕ್ತಿ ಎಂದು ಹೆಸರಿಸಿದೆ.

ಈ ಪಟ್ಟಿಯಲ್ಲಿ ಮೋದಿ ಅಗ್ರಸ್ಥಾನದಲ್ಲಿದ್ದರೆ ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ನಂತರದ ಸ್ಥಾನದಲ್ಲಿ ಇದ್ದಾರೆ. ಮೋದಿ ಅವರನ್ನು ‘ವರ್ಚಸ್ವಿ ಹಾಗೂ  ವ್ಯವಹಾರ ಸ್ನೇಹಿ’ ನಾಯಕ ಎಂದು ಬಣ್ಣಿಸಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಸಿಜಿನೆಟ್‌ ಸ್ವರ ಸ್ಥಾಪಕ ಶುಭ್ರಾಂಶು ಚೌಧರಿ, ಸುದ್ದಿ ನಿರೂಪಕಿ ಪದ್ಮಿನಿ ಪ್ರಕಾಶ್‌,  ಇಂಡಿಯನ್‌ ನ್ಯಾಷನಲ್‌ ಪೊಲಿಯೋ ಪ್ಲಸ್‌ ಕಮಿಟಿ ಅಧ್ಯಕ್ಷ ದೀಪಕ್‌್ ಕಪೂರ್‌, ಕೇಂಬ್ರಿಜ್‌ನ ಎಂಜಿನಿಯರ್‌ ಸಂಗೀತಾ ಭಾಟಿಯಾ, ಹವಾಮಾನ ತಜ್ಞ ವೀರಭದ್ರನ್‌ ರಮಾನಾಥನ್‌್ ಪಟ್ಟಿಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT