ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇಶ್ಯಾವೃತ್ತಿ ಕಾನೂನುಬದ್ಧವಾಗಲಿ’

Last Updated 2 ಸೆಪ್ಟೆಂಬರ್ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು:  ವೇಶ್ಯಾವೃತ್ತಿಯನ್ನು ಸರ್ಕಾರ ಕಾನೂನುಬದ್ಧ­ಗೊಳಿಸಬೇಕು ಎಂದು ‘ನ್ಯಾಯಕ್ಕಾಗಿ ನಾವು’ ಸಂಘಟನೆ ಒತ್ತಾಯಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘ­ಟನೆಯ ಅಧ್ಯಕ್ಷ ಇಂದೂಧರ ಹೊನ್ನಾಪುರ, ‘ಭಾರತದಲ್ಲಿ  ಪುರಾತನ ಕಾಲದಿಂದಲೂ ವೇಶ್ಯಾವೃತ್ತಿ ನಡೆದುಕೊಂಡು ಬಂದಿದೆ. ಅದನ್ನು ಕಾನೂನುಬದ್ಧಗೊಳಿಸುವುದರಿಂದ ವೇಶ್ಯಾ­ವೃತ್ತಿಯಲ್ಲಿ ತೊಡಗಿರುವವರಿಗೆ  ರಕ್ಷಣೆ, ವೃತ್ತಿ ಗೌರವ ಹಾಗೂ ಆರೋಗ್ಯ ರಕ್ಷಣೆಗೆ ಅವಕಾಶ ನೀಡಿದಂತಾಗುತ್ತದೆ’ ಎಂದರು.

‘ಸಾಹಿತಿ ಕೆ.ಎಸ್‌.ನಿಸಾರ್‌ ಅಹಮದ್‌ ಅವರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಟಿಯಿಂದ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕೆಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ವೇಶ್ಯಾವೃತ್ತಿಯಲ್ಲಿ ತೊಡಗಿರುವವರು ಸಮಾಜ­ದ್ರೋಹಿಗಳಲ್ಲ. ಬಹಿಷ್ಕೃತರಲ್ಲ. ಅವರನ್ನು ಗೌರವ­ದಿಂದ ಕಾಣುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಅವರ ಬದುಕು ಸದಾ ಆತಂಕ, ಭಯದಿಂದ ಕೂಡಿರುತ್ತದೆ. ಸಮಾಜದ ತುಚ್ಛ ಮಾತುಗಳನ್ನು ಸಹಿಸಿಕೊಂಡು, ಅವರ ಮಕ್ಕಳು ಮತ್ತು ಅವರನ್ನು ನಂಬಿದ ಕುಟುಂಬದವರು ಅವಮಾ­ನದಿಂದ ಬದುಕಬೇಕಾಗುತ್ತದೆ. ಹೀಗಾಗಿ, ಅವರೆಲ್ಲರಿಗೂ ಜೀವನ ಭದ್ರತೆಯನ್ನು ಒದಗಿಸಲು ಹಾಗೂ ಎಲ್ಲರಂತೆ ಗೌರವದಿಂದ ಬದುಕಲು ಈ ವೃತ್ತಿಯನ್ನು ಕಾನೂನು­ಬದ್ಧಗೊಳಿಸುವುದು ಮುಖ್ಯವಾಗಿದೆ’ ಎಂದರು.

ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ‘ವೇಶ್ಯಾವೃತ್ತಿಯಲ್ಲಿ ತೊಡಗಿರುವವರು ಪೊಲೀಸರ ದೌರ್ಜನ್ಯ ಹಾಗೂ ದಲ್ಲಾಳಿಗಳ ಶೋಷಣೆಯಿಂದ ನರಳಬೇಕಾಗುತ್ತದೆ. ಇವುಗಳಿಗೆ ಮುಕ್ತಿ ದೊರಕಿಸಲು ಕಾನೂನುಬದ್ಧ­ಗೊಳಿಸು­ವುದು ಅಗತ್ಯವಾಗಿದೆ’ ಎಂದರು.
ಸಂಘಟನೆಯ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್‌, ‘ಅಹಿಂದ’ ರಾಜ್ಯಾಧ್ಯಕ್ಷ ಪ್ರೊ.ಎನ್‌.ವಿ.ನರಸಿಂಹಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT