ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಾಯಾಮದಿಂದ ಉತ್ತಮ ಆರೋಗ್ಯ’

Last Updated 31 ಜುಲೈ 2015, 11:07 IST
ಅಕ್ಷರ ಗಾತ್ರ

ಗದಗ: ನಲವತ್ತು ವಯಸ್ಸಿನ ನಂತರ ಮಹಿಳೆಯರಿಗೆ ಕಾಣಿಸಿಕೊಳ್ಳುವ ಋತು ಬಂಧ ಸಮಸ್ಯೆಗಳಿಂದ ದೈಹಿಕ, ಮಾನ ಸಿಕ, ಸಾಮಾಜಿಕ ಮತ್ತು ಲೈಂಗಿಕ ತೊಂದರೆ ಉಂಟಾಗುತ್ತದೆ ಎಂದು ಪ್ರಸೂತಿ ತಜ್ಞೆ ಡಾ.ರಾಧಿಕಾ ಕುಲಕರ್ಣಿ ಹೇಳಿದರು.

ಸ್ಥಳೀಯ ಸಿದ್ಧಲಿಂಗ ನಗರದಲ್ಲಿ ‘ಮಹಿಳೆಯರಿಗೆ ಕಾಡುವ ಋತುಬಂಧದ ಸಮಸ್ಯೆಗಳು’ ಎಂಬ ವಿಷಯ ಕುರಿತು ಮಾತನಾಡಿದ ಅವರು, ಋತುಬಂಧ ಸಮಸ್ಯೆ  ಎದುರಾದಾಗ ದೈಹಿಕ ಕಿರಿಕಿರಿ, ಖಿನ್ನತೆ ಹಾಗೂ ಸಾಮಾಜಿಕವಾಗಿ ಒಂಟಿ ತನ ಕಾಡುತ್ತದೆ ಎಂದರು. ಇದರಿಂದ ದೂರವಾಗಲು ಸಮಾಜ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಸಂಗೀತ ಕೇಳು ವುದು ಸೇರಿದಂತೆ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು. ಕ್ಯಾಲ್ಸಿಯಂ ಕೊರತೆ ಉಂಟಾಗದಂತೆ  ಡಾಕ್ಟರ್ ಸಲಹೆ ಪಡೆದು ಔಷಧ ಹಾಗೂ ಉತ್ತಮ ಆಹಾರ ಪದ್ಧತಿ ಅಳವಡಿಸಿ ಕೊಳ್ಳಬೇಕು. ತೊಂದರೆಗಳಿಂದ ಮುಕ್ತಿ ಪಡೆಯಲು ನಿಯಮಿತ ಆಹಾರ ಸೇವನೆ ಹಾಗೂ ವ್ಯಾಯಾಮ ಮಾಡುವ ಮೂಲಕ ಕ್ರಮ ಬದ್ಧ ಜೀವನ ಶೈಲಿ ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಶಾಂತಾ ಮುಂದಿನ ಮನಿ ಮಾತನಾಡಿ, ಮಹಿಳೆ ಆರೋಗ್ಯ ವಾಗಿದ್ದರೆ ಮನೆ ಆರೋಗ್ಯ ವಾಗಿರುತ್ತದೆ. ಮಹಿಳೆಗೆ  ಆರೋಗ್ಯದ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದರು. ಸುವರ್ಣ ಲೇಡಿಸ್‌ ಕ್ಲಬ್‌ ಅಧ್ಯಕ್ಷೆ ಶೈಲಜಾ ಕವಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜ್ಞಾನ ಕೇಂದ್ರದ ಸದಸ್ಯರಾದ ಲತಾ ಬಸವಾ, ಅನುರಾಧ ಬಸವಾ, ಲತಾ ಪತ್ತಾರ, ಗಿರಿಜಾ ಅಕ್ಕೂರು, ಕವಿತಾ ಬಂಗಾರಿ, ಪರಿಮಳಾ ಕುಲಕರ್ಣಿ, ಸುಮಂಗಲಾ ಹದ್ಲಿ, ಶೋಭಾ ಚಿನ್ನೂರು, ಸೀಮಾ, ವಿಜಯಾ ಚನ್ನಶೆಟ್ಟಿ, ಮಾದೇವಿ ಚರಂತಿಮಠ, ಪುಷ್ಪಾ ಶಿದ್ಲಿಂಗ, ವಿಜಯಾ ಕುಲಕರ್ಣಿ, ಜ್ಯೋತಿ ಜಾನೋಪಂತರ ಇದ್ದರು. ಗೌರಿ ಹಾಗೂ ಸುನಂದಾ ಪ್ರಾರ್ಥಿಸಿದರು, ಸುಮಾ ಆರ್.ಎನ್.ಸ್ವಾಗತಿಸಿದರು, ಕಲಾವತಿ ನಿರೂಪಿಸಿದರು. ವಿಜಯಾ ವಂದಿಸಿದರು.

ಆರೋಗ್ಯ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.  
  -ಕೆ.ಎಸ್‌.ಪಲ್ಲೇದ, ಬಸವಯೋಗ ಮಂದಿರ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT