ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶವ ಪರೀಕ್ಷೆ ವರದಿಗಳು ನೈಜವಲ್ಲ’

Last Updated 21 ಆಗಸ್ಟ್ 2014, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಶವ ಪರೀಕ್ಷೆಯ ಎಲ್ಲಾ ವರ­­­ದಿಗಳೂ ನೈಜವಾಗಿರುವುದಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಹೈಕೋರ್ಟ್‌ ಈ ರೀತಿಯ ವರ­ದಿ­ಗಳನ್ನು ಪ್ರಾಸಿಕ್ಯೂಷನ್‌ ಯಾವಾ­ಗಲೂ ಗಂಭೀರವಾಗಿ ಗಮನಿಸಿ ಮುಂದು­­­­­­­ವರಿಯಬೇಕು ಎಂದು ಸಲಹೆ ಮಾಡಿತು.

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳಾದ ಪುಷ್ಕರ್ ರಾವ್‌ ಹಾಗೂ ಸಾವಿತ್ರಿ ದೇವಿ ದಂಪ­ತಿಯ ಮಗ ಪ್ರಳಯ್‌ 2011ರ ಜನ­ವರಿ 10ರಂದು ತನ್ನ ಮನೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಮೃತ­ಪಟ್ಟಿದ್ದ. ಶವಪರೀಕ್ಷೆ ವರದಿ  ಇದನ್ನು ಆತ್ಮಹತ್ಯೆ ಎಂದು ಹೇಳಿತ್ತು.
ಆದರೆ ಪ್ರಳಯ್‌ನ ತಂದೆ ತಾಯಿ ಇದನ್ನು ಒಪ್ಪಿರಲಿಲ್ಲ. ನನ್ನ ಮಗನ ಸಾವು ಅಸಹ­ಜ­­ವಾಗಿದೆ. ಆದ್ದರಿಂದ ಈ ಪ್ರಕರಣ­ವನ್ನು ಪುನರ್‌ ತನಿಖೆ ನಡೆಸಲು ಪೊಲೀ­ಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಗುರುವಾರ ನ್ಯಾಯಮೂರ್ತಿ ಎ.ಎನ್‌.ವೇಣು­ಗೋಪಾಲ ಗೌಡ ಅವ­­ರಿದ್ದ ಪೀಠ ಪ್ರಕರಣದ ವಿಚಾ­ರಣೆ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯ­­ಪೀಠವು ಪ್ರಾಸಿ­­ಕ್ಯೂಷನ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

‘ಪೊಲೀಸರು ಪ್ರಳಯ್‌ ನೇಣು ಹಾಕಿ­ಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖ­ಲೆ­ಗಳಲ್ಲಿ ಶವ ಸ್ಥಳಾಂತರ ಮಾಡುವ ಮುನ್ನ ನೇಣು ಬಿಗಿದುಕೊಂಡಿರುವ ಛಾಯಾ­ಚಿತ್ರ­ಗ­ಳನ್ನು ಗಮನಿಸಿದರೆ ಹಾಗೆನ್ನಿಸುವುದೇ ಇಲ್ಲ. ಚಾವಣಿಗೂ ಹಾಗೂ ಮಂಚದ ಮಧ್ಯೆ ದೇಹ ನೇತಾಡುವಷ್ಟು ಅಂತರ­ವಿಲ್ಲ. ನೇಣು ಹಾಕಿಕೊಂಡಾಗ ಸಾಮಾ­ನ್ಯ­­­ವಾಗಿ ನಾಲಿಗೆ ಬಾಯಿಯಿಂದ  ಹೊರ ಚಾಚಿಕೊಂಡಿರುತ್ತದೆ.

ಆದರೆ ಅದೂ ಇಲ್ಲಿ ಕಾಣಬರುತ್ತಿಲ್ಲ. ಆದ್ದ­ರಿಂದ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಅನ್ನಿಸುತ್ತಿಲ್ಲ. ಯಾರೋ ಇದನ್ನು ನೇತುಹಾಕಿದ್ದಾರೆ ಎನ್ನಿಸುತ್ತಿದೆ. ಅಮಾಯಕ ಯುವಕನೊಬ್ಬನ ಸಾವನ್ನು ಪೊಲೀಸರು ನಿರ್ಲಕ್ಷ್ಯ ಮಾಡು­­­­ತ್ತಿ­ದ್ದಾರೆ. ವಿಧಿ ವಿಜ್ಞಾನ ಪ್ರಯೋ­ಗಾ­ಲಯದ ವರದಿಗಳು ಹಾಗೂ ಶವ ಪರೀಕ್ಷೆಯ ವರದಿಗಳು ನ್ಯಾಯ­ಪೀಠಕ್ಕೆ ತೃಪ್ತಿ ತರುವಂತಿಲ್ಲ. ಶವ ಪರೀಕ್ಷೆಯನ್ನು ವೈದ್ಯರಲ್ಲದ ಬೇರೆ ಯಾರೋ ನಡೆಸಿರುವ ಅನು­ಮಾನ­ಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಈ ಪ್ರಕ­ರ­ಣಕ್ಕೆ ಸಂಬಂಧಿಸಿದ ಎಲ್ಲ ವರ­ದಿ­ಗಳನ್ನೂ ಜಿಲ್ಲಾಧಿಕಾರಿಗಳಿಂದ ತರಿಸಿ­ಕೊಳ್ಳಿ ಮತ್ತು ಎಲ್ಲ ದಾಖಲೆಗಳನ್ನೂ ಸುರ­­ಕ್ಷಿತವಾಗಿಡಿ’ ಎಂದು ತಾಕೀತು ಮಾಡಿತು.ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

ಹೈದರಾಬಾದ್‌ ಮೂಲದ ಪುಷ್ಕರ್‌ ರಾವ್‌ ದಂಪತಿಯ ಉಳಿದ ಮಕ್ಕಳು ಆಸ್ಟ್ರೇಲಿ­ಯಾದಲ್ಲಿ ನೆಲೆಸಿದ್ದು ಅವರಲ್ಲಿ ಪ್ರಳಯ್‌ ಇಲ್ಲಿ ವಾಸವಿದ್ದ. ಈತ ತನ್ನ ವಿದ್ಯಾ­ಭ್ಯಾಸವನ್ನು ಇಂಗ್ಲೆಂಡಿನಲ್ಲಿ ಪೂರೈ­ಸಿದ್ದ. ಮದುವೆಯೂ ಆಗಿ ಪತ್ನಿ ಜೊತೆ ತಂದೆ ತಾಯಿಯ ಒಟ್ಟಿಗೆ ವಾಸವಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT