ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾರದಾ ಹಗರಣ: ಟಿಎಂಸಿ ಮುಖ್ಯಸ್ಥೆಯೂ ಫಲಾನುಭವಿ’

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಬಹುಕೋಟಿ ಚಿಟ್‌ ಫಂಡ್‌ ಹಗರಣದ ಶಾರದಾ  ಸಮೂಹಕ್ಕೆ ಸೇರಿರುವ  ಶಾರದಾ ಮಾಧ್ಯಮದಿಂದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೊಡ್ಡ ಪ್ರಮಾಣದಲ್ಲಿ ಲಾಭ ಪಡೆದುಕೊಂಡಿದ್ದಾರೆ ಎಂದು  ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಸಂಸದ ಕುನಾಲ್‌ ಘೋಷ್ ಸೋಮವಾರ ಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.

2013ರ ಏಪ್ರಿಲ್‌ನಲ್ಲಿ ಶಾರದಾ ಚಿಟ್‌ ಫಂಡ್‌ ಹಗರಣ ಬೆಳಕಿಗೆ ಬಂದ ಬಳಿಕ  ಶಾರದಾ ಮಾಧ್ಯಮ ತನ್ನ ಕಾರ್ಯಚಟುವಟಿಕೆ ನಿಲ್ಲಿಸಿದೆ. ಇದಕ್ಕೂ ಮುನ್ನ ಅದು ಹಲವಾರು ದಿನಪತ್ರಿಕೆ­ಗಳು ಹಾಗೂ ವಾಹಿನಿಗಳನ್ನು ನಡೆಸು­ತ್ತಿತ್ತು. ಕುನಾಲ್‌ ಘೋಷ್‌್ ಶಾರದಾ ಮಾಧ್ಯಮದ ಮುಖ್ಯಕಾರ್ಯ­ನಿರ್ವಹಣಾಧಿಕಾರಿಯಾಗಿದ್ದರು.

  ‘ ಈ ಹಗರಣದಲ್ಲಿ ಮಮತಾ ಹಾಗೂ  ಮುಕುಲ್‌ ರಾಯ್‌ ಕೂಡ ಭಾಗಿಯಾಗಿದ್ದಾರೆ. ನನ್ನಲ್ಲಿ ಈ ಬಗ್ಗೆ ನಿರ್ದಿಷ್ಟ ಮಾಹಿತಿ ಇದೆ. ಸಿಬಿಐ ನನ್ನನ್ನು ಪ್ರಶ್ನಿಸಿದಾಗ ಈ ಮಾಹಿತಿ  ಒದಗಿಸುತ್ತೇನೆ’ ಎಂದೂ ಘೋಷ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT