ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಕರಿಗೆ ಬೇಸರ ತಂದ ಪೊಳ್ಳು ಭರವಸೆ’

ಕಾಂಗ್ರೆಸ್‌ ಸಮಿತಿ ಸಭೆಯಲ್ಲಿ ಸಚಿವ ಆರ್‌.ವಿ. ದೇಶಪಾಂಡೆ ಟೀಕೆ
Last Updated 30 ಮೇ 2016, 6:35 IST
ಅಕ್ಷರ ಗಾತ್ರ

ಕಾರವಾರ: ‘ಬಸವರಾಜ ಹೊರಟ್ಟಿ ಯವರ ಪೊಳ್ಳು ಭರವಸೆಗಳನ್ನು ಕೇಳಿ ಕೇಳಿ ಶಿಕ್ಷಕರಿಗೂ ಬೇಸರವಾಗಿದೆ. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಅವರನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ‘ಜೆಡಿಎಸ್‌ನ ಹಳೆ ತಲೆಗೆ ಈ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಈಶ್ವರ ಶಿಕ್ಷಕರ ಸಂಕಷ್ಟ ಅರಿತವರು. ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಿಕ್ಷಕರ ಪರ ಧ್ವನಿಯಾಗಲು ಅಣಿಯಾಗಿ ದ್ದಾರೆ’ ಎಂದರು.

‘ಅನುದಾನಿತ ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ ನಾಲ್ಕು ಎಂಜಿನಿಯರಿಂಗ್ ಕಾಲೇಜು ಗಳಿಗೆ ನಮ್ಮ ಸರ್ಕಾರ ತಲಾ ₹ 60 ಕೋಟಿ ಅನುದಾನ ನೀಡಿದೆ. ಇದನ್ನೆಲ್ಲ ಮತದಾರರು ಗಮನಿಸುತ್ತಿದ್ದಾರೆ. ಯಾವ ಜನಪ್ರತಿನಿಧಿ ಎಷ್ಟು ಕೆಲಸ ಮಾಡಿದ್ದಾನೆ? ಎಂಬುದನ್ನು ಮತದಾರರು ಅರಿತಿದ್ದಾರೆ. ಪೊಳ್ಳು ಭರವಸೆಗಳನ್ನು ನೀಡುತ್ತಿರುವ ವರಿಗೆ ತಕ್ಕಪಾಠ ಕಲಿಸುತ್ತಾರೆ’ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಟಿ. ಈಶ್ವರ ಮಾತನಾಡಿ, ‘ಪ್ರಾಧ್ಯಾಪಕನಾಗಿ ನಾನು ಹಲವಾರು ವರ್ಷ ಕೆಲಸ ಮಾಡಿದ್ದು, ಶಿಕ್ಷಕರ ಸಮಸ್ಯೆ ಏನೆಂದು ತಿಳಿದಿದ್ದೇನೆ. ಅರಣ್ಯ ನಿಗಮದ ಅಧ್ಯಕ್ಷನಾಗಿದ್ದಾಗ ಜಿಲ್ಲೆಯ ಪ್ರತಿ ಶಾಲೆಗಳಿಗೂ ಭೇಟಿ ನೀಡಿ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಶಿಕ್ಷಕರು ನನ್ನ ಈ ಚುನಾವಣೆಯಲ್ಲಿ ಕೈಹಿಡಿಯುತ್ತಾರೆ ಎಂಬ ಭರವಸೆಯಿದೆ’ ಎಂದರು.

‘ಪರಿಷತ್ತಿಗೆ ಆಯ್ಕೆಯಾದರೆ ಶಿಕ್ಷಕರಿ ಗಿರುವ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಸರ್ಕಾ ರಕ್ಕೆ ಶಿಕ್ಷಕರ ಪರಿಸ್ಥಿತಿ ಅರ್ಥಮಾಡಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರುತ್ತೇನೆ.

ಕಳೆದ ಹಲವಾರು ವರ್ಷ ಗಳಿಂದ ಈ ಕ್ಷೇತ್ರದಿಂದ ಆಯ್ಕೆ ಯಾಗುತ್ತಿರುವ ಹೊರಟ್ಟಿ ಅವರು ತಮ್ಮ ವರ್ತನೆಗಳಿಂದಾಗಿ ಶಿಕ್ಷಕರ ನಂಬಿಕೆ ಕಳೆದುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT