ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿವಸೇನಾ ಜತೆ ಇನ್ನೂ ಸ್ನೇಹ’

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶಿವಸೇನಾ­ದೊಂ­ದಿಗೆ ನಮ್ಮ ಗೆಳೆತನ ಉಳಿ­ಯುವ ಭರವಸೆಯಿದೆ ಎಂದು  ಮಹಾ­ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣ­ವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇ ಸಮಯ­ದಲ್ಲಿ ಸರ್ಕಾರಕ್ಕೆ ಎನ್‌ಸಿಪಿ ನೀಡಿರುವ ಬಾಹ್ಯ ಬೆಂಬಲ­ವನ್ನು ನಾವು ಒಪ್ಪಿಯೂ ಇಲ್ಲ, ನಿರಾಕರಿ­ಸಿಯೂ ಇಲ್ಲ ಎಂದಿದ್ದಾರೆ.

‘ಶಿವಸೇನಾದೊಂದಿಗೆ ನಮ್ಮ ಗೆಳೆ­ತನ ಬಹಳ ಹಳೆಯದು. ಭವಿಷ್ಯ­ದಲ್ಲೂ ಈ ಗೆಳೆತನ ಮುಂದುವರೆ­ಯುವ ಭರವಸೆ­ಯಿದೆ. ನಾವು ಗೆಳೆ­ಯ­ರಾಗೇ ಇರುತ್ತೇವೆ. ಈ ಬಗ್ಗೆ ನಡೆಯು­ತ್ತಿರುವ ಮಾತುಕತೆ­ಗಳು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿ­ದ್ದಾರೆ.

ಇಲ್ಲಿ ನಡೆದಿರುವ ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಅವರು ಮಾತನಾಡಿದರು. ಆರ್‌ಎಸ್‌ಎಸ್‌ ಎರಡೂ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದೆ ಎಂಬ ವದಂತಿಯನ್ನು ನಿರಾಕರಿಸಿರುವ ಅವರು, ‘25 ವರ್ಷ ಜತೆಯಲ್ಲಿ ಆಡಳಿತ ನಡೆಸಿ­ರುವ ನಾವೇ ಈ ಬಗ್ಗೆ ಚರ್ಚಿಸುತ್ತೇವೆ. ವಿಶ್ವಾಸ ಮತಯಾಚ­ನೆಯ ನಂತರ ಎದುರಿಸಿದಷ್ಟು ಟೀಕೆಗ­ಳನ್ನು, 22 ವರ್ಷದ ನನ್ನ ರಾಜಕೀಯ ಜೀವನ­ದಲ್ಲೂ ಎದುರಿಸಿಲ್ಲ. ಎಂದು ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT