ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕಟದಲ್ಲಿ ನೆರವು ನೀಡಬೇಕು’

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಮಾಗಡಿ: ಫಲಾಪೇಕ್ಷೆ ಇಲ್ಲದೆ ಯುವಜನತೆ ರಕ್ತದಾನ ಮಾಡಿ ತುರ್ತುಸ್ಥಿತಿಯಲ್ಲಿ ತೊಳಲಾಡುತ್ತಿರುವ ಜೀವ ಉಳಿಸಲು ಮುಂದಾಗಬೇಕು ಎಂದು ಜಡೇದೇವರ ಮಠಾಧೀಶ ಇಮ್ಮಡಿ ಬಸವರಾಜು ಸ್ವಾಮಿ ತಿಳಿಸಿದರು.

ಪಟ್ಟಣದ ವೀರಶೈವ ಗಿರಿಜಾ  ಕಲ್ಯಾಣ ಮಂಟಪದಲ್ಲಿ ವೀರಶೈವ ಮಂಡಳಿ, ವಿನಾಯಕ ಗೆಳೆಯರ ಬಳಗ, ರೋಟರಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪರೋಪಕಾರ ಮಾಡಿದರೆ ಪುಣ್ಯ ಲಬಿಸುತ್ತದೆ ಎಂಬ ಅನುಭಾವಿಗಳ ಮಾತಿನಂತೆ ನಾವೆಲ್ಲರೂ ಸಂಕಟದಲ್ಲಿ ಇರುವವರಿಗೆ ನಮ್ಮ ಕೈಲಾದ ನೆರವು ನೀಡಬೇಕು ಎಂದು ಸ್ವಾಮಿಜಿ ತಿಳಿಸಿದರು. ಪುರಸಭೆ ಸದಸ್ಯೆ ನಿರ್ಮಲಾ ಸೀತಾರಾಮು, ಶಿವರುದ್ರಮ್ಮ ವಿಜಯ ಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಮಹೇಶ್‌, ರೋಟರಿ ಸಂಸ್ಥೆಯ ಸತೀಶ್‌ ಪ್ರಸಾದ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT