ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂತುಲಿತ ಅಭಿವೃದ್ಧಿಯಿಂದ ದೇಶದ ಪ್ರಗತಿ’

Last Updated 21 ಆಗಸ್ಟ್ 2014, 13:52 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಭಾರತವನ್ನು ಪ್ರಗತಿಯ ಶಿಖರಕ್ಕೆ ಕೊಂಡೊಯ್ಯಲು ಎಲ್ಲಾ ರಾಜ್ಯಗಳ ಸಮತೋಲನದ ಅಭಿವೃದ್ಧಿ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ.

ಜಾರ್ಖಂಡ್‌ನಲ್ಲಿ ಹಲವು ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಭಾರತವನ್ನು ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯಬೇಕಾದರೆ ದೇಶದ ಯಾವುದೇ ಭಾಗ ದುರ್ಬಲವಾಗಿರಬಾರದು’ ಎಂದರು.

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸ್ಥಿರಸರ್ಕಾರ ಹೊಂದಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ ಅವರು, ‘ಈ ಸರ್ಕಾರ (ಕೇಂದ್ರ) ಹೇಗೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುತ್ತಿದೆ? ಜನರು ಬಹುಮತ ನೀಡಿ ಆಯ್ಕೆ ಮಾಡಿರುವುದು ಇದಕ್ಕೆ ಕಾರಣ. ಇದು ಅಸ್ಥಿರ ಅಥವಾ ಸಮ್ಮಿಶ್ರ ಸರ್ಕಾರವಾಗಿದ್ದರೇ ನಾನು ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುತ್ತಿರಲಿಲ್ಲ’ ಎಂದರು.

‘ಪಶ್ಚಿಮ ಭಾರತದಲ್ಲಿ ಕೆಲವು ಆರ್ಥಿಕ ಚಟುವಟಿಕೆಗಳು ಕಂಡುಬರುತ್ತಿವೆ. ಆದರೆ ದೇಶದ ಈಶಾನ್ಯ ಹಾಗೂ ಕೇಂದ್ರ ಭಾಗದಲ್ಲಿ ಜನರು ಅಭಿವೃದ್ಧಿಗಾಗಿ ಕಾದು ಕುಳಿತಿದ್ದಾರೆ. ಬಡತನ ಬಡಜನರ ಜೀವನವನ್ನು ನಾಶ ಮಾಡಿದೆ’ ಎಂದು ಅಭಿಪ್ರಾಯ ಪಟ್ಟರು.

ದೇಶದ ಈಶಾನ್ಯ ಹಾಗೂ ಪಶ್ಚಿಮ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ 765 ಕೆ.ವಿ ಸಾಮರ್ಥ್ಯದ ರಾಂಚಿ–ಧರ್ಮಜಯಾಗಡ್–ಸಿಪಾತ್ ವಿದ್ಯುತ್ ಟ್ರಾನ್ಸ್‌ಮಿಷನ್‌ ಲೈನ್‌ ಮಹತ್ವಪೂರ್ಣ ಪಾತ್ರವಹಿಸಬಲ್ಲದು. ಇದರಲ್ಲಿ ಜಾರ್ಖಂಡ್‌ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಮೋದಿ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT