ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಪುಟ ಸೇರ್ಪಡೆ ಮುಖ್ಯಮಂತ್ರಿಗೆ ಬಿಟ್ಟದ್ದು’

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸಚಿವ ಸಂಪುಟಕ್ಕೆ ಸೇರಿಸಿ­ಕೊಳ್ಳು­ವುದು, ಬಿಡುವುದು ಮುಖ್ಯ­ಮಂತ್ರಿಗೆ ಬಿಟ್ಟ ವಿಚಾರ’ ಎಂದು ಸಚಿವ­ರಾದ ಶಾಮನೂರು ಶಿವಶಂಕರಪ್ಪ, ಕಿಮ್ಮನೆ ರತ್ನಾಕರ ಹಾಗೂ ವಿಧಾನ­ಸಭಾ­ಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

‘ಸಚಿವ ಸಂಪುಟದಿಂದ ಕೈ­ಬಿಟ್ಟರೂ ಚಿಂತೆಯಿಲ್ಲ. ಯಾವಾ­ಗಲೂ ನನ್ನ ಹೆಲಿಕಾ­ಪ್ಟರ್‌ ಸಿದ್ಧವಿರುತ್ತದೆ’ ಎಂದು ಶಾಮ­ನೂರು ಶಿವಶಂಕರಪ್ಪ ಸುದ್ದಿ­­­ಗೋ­ಷ್ಠಿ­­­­ಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸರ್ಕಾರದ ವಿರುದ್ಧ ಕಾಗೋಡು ತಿಮ್ಮಪ್ಪ ಅವರು ಚಾಟಿ ಬೀಸಿ­ದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿ­ಸಿದ ಶಾಮನೂರು, ‘ಅವರು ಹಿರಿಯರು, ಮನೆಯ ಯಜಮಾನರ ಕೆಲಸ ಮಾಡಿದ್ದಾರೆ’ ಎಂದರು.

‘ನಾನು ಮಾಡಿದ ಕೆಲಸ ತೃಪ್ತಿ ತಂದಿದೆ. ಇಲಾಖೆಯಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ. ಇನ್ನೇನು ಆಕಾಶ ಭೂಮಿಗೆ ಇಳಿಸಲು ಸಾಧ್ಯವೇ?’ ಎಂದು ಕಿಮ್ಮನೆ ಪ್ರಶ್ನಿಸಿದರು. ‘ನಾನು ಸ್ಥಾನ ಕೇಳಿಲ್ಲ. ಸೇರಿಸಿಕೊಳ್ಳು­ವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ’ ಎಂದು ಕಾಗೋಡು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT