ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಶೋಧನಾ ಮನೋಭಾವ ಅಗತ್ಯ’

Last Updated 1 ಆಗಸ್ಟ್ 2014, 20:15 IST
ಅಕ್ಷರ ಗಾತ್ರ

ಯಲಹಂಕ: ‘ವಿದ್ಯಾರ್ಥಿಗಳು ಸಂಶೋ­ಧನೆಯ ಮನೋಭಾವವನ್ನು ಮೈಗೂ­ಡಿ­ಸಿ­ಕೊಂಡು ಹೊಸ ಹೊಸ ಆವಿಷ್ಕಾರ­ಗಳನ್ನು ಮಾಡಲು ಮುಂದಾಗಬೇಕು’ ಎಂದು ಕಾನ್ಪುರದ ಐಐಟಿಯ ಪ್ರಾಧ್ಯಾಪಕ ಪ್ರೊ. ಎಂ.ಆನಂದಕೃಷ್ಣನ್‌ ಸಲಹೆ ನೀಡಿದರು.

ಇಲ್ಲಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿ ರುವ  ‘ಕಂಪ್ಯೂಟಿಂಗ್‌, ಮಾಹಿತಿ, ಸಂವ­ಹನ ಮತ್ತು ಅನ್ವಯಿಕೆ’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ­ವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಕೊಠಡಿಗಳಲ್ಲಿ ಪಾಠ ಪ್ರವಚನ ಮಾಡು­ವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ ಇಂದು ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ­ಗಳಲ್ಲಿ ಪಾಠ–ಪ್ರವಚನದ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಿಗೆ  ಅನು­ಕೂಲ­ವಾಗುವಂತೆ ಸಂಶೋಧನಾ ಕಾರ್ಯಕ್ರಮ ಗಳು ಒಂದು ಮುಖ್ಯ ಭಾಗವಾಗಿವೆ ಎಂದು ತಿಳಿಸಿದರು.

ಬೆಂಗಳೂರು ಐಐಎಸ್‌ಸಿ ಏರೋ­ಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾದ್ಯಾಪಕ ಪ್ರೊ.ಎನ್‌.ಬಾಲಕೃಷ್ಣನ್‌ ಮಾತನಾಡಿ, ಇಂದಿನ ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ, ನ್ಯಾನೋ ಮತ್ತು ಜೈವಿಕ ತಾಂತ್ರಿಕತೆ­ಗಳನ್ನು ಒಗ್ಗೂಡಿಸಿ, ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸುಭದ್ರತೆ­ಯನ್ನು ಕಾಪಾಡಿಕೊಳ್ಳಲು ಆಧುನಿಕ ವಿಜ್ಞಾನಗಳ ಒಗ್ಗೂಡುವಿಕೆ ಮತ್ತು ಬಳಕೆ ಅತ್ಯವಶ್ಯಕ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಎಚ್‌.ಸಿ. ನಾಗ­ರಾಜ್‌, ಎಂಸಿಎ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ್‌ ನಾಯಕ್‌ ಹಂಸಾವತ್‌, ಪ್ರಾಧ್ಯಾಪಕಿ ಡಾ.ಎನ್‌.ನಳಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT