ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರ’

Last Updated 28 ಮಾರ್ಚ್ 2015, 7:42 IST
ಅಕ್ಷರ ಗಾತ್ರ

ಉಡುಪಿ:  ಕರ್ನಾಟಕ ವಿದ್ಯುತ್‌ ನಿಗಮ ಹೊಸಂಗಡಿ ಕೆಪಿಸಿಯ ಎನರ್ಜಿ ಕ್ಲಬ್‌ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರ­ಮವನ್ನು ವಾರಾಹಿಯ ಸೂಪರಿಂಟೆಂ­ಡೆಂಟ್‌ ಎಂಜಿನಿಯರ್‌ ಕೆ. ಕಮಲಾಕ್ಷ ಉದ್ಘಾಟಿಸಿದರು.

ಸಮಾಜದ ಮುನ್ನಡೆಗೆ ಮಹಿಳೆಯರ ಕೊಡುಗೆ ಅಪಾರ. ಎಲ್ಲ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು, ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುತ್ತಿ­ರುವುದು ಶ್ಲಾಘನೀಯ. ಮಹಿಳೆಯರ ಸೇವೆ, ಕೊಡುಗೆ ಸ್ಮರಿಸಲು ಇದು ಉತ್ತಮ ಸಂದರ್ಭ ಎಂದರು. ಬ್ಯಾಂಕ್‌ ಉದ್ಯೋಗಿ ಪ್ರೇಮಕಲಾ ಡಿ. ಮಲ್ಯ ಮಾತನಾಡಿ, ಮಹಿಳೆ ತನ್ನನ್ನು ಮನೆಗೆ ಮಾತ್ರ ಸೀಮಿತಗೊಳಿಸಿಕೊಳ್ಳದೇ, ಸಾರ್ವಜನಿಕ ರಂಗದಲ್ಲೂ ಮುಂದುವರಿ­ಯುತ್ತಿದ್ದಾಳೆ. ಸಮಾನತೆ ಸಾಧಿಸುವುದರ ಜೊತೆಗೆ ತನ್ನನ್ನು ತಾನು ತಿಳಿದುಕೊಂಡು ಇನ್ನೂ ಪ್ರಬುದ್ಧಳಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾ­ಡಿದ ವೈದ್ಯಕೀಯ ಅಧೀಕ್ಷಕಿ ಡಾ. ವಿಜ­ಯ­ಲಕ್ಷ್ಮೀ ನಾಯ್ಕ್‌, ಒತ್ತಡದ ಬದುಕು ಸಾಗಿಸುತ್ತಿರುವ ಮಹಿಳೆಯರಿಗೆ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊ­ಳ್ಳಬೇಕು ಎಂಬುದರ ಕುರಿತು ವಿವರ­ವಾದ ವೈದ್ಯಕೀಯ ಸಲಹೆ ನೀಡಿದರು.

ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌. ಮೋಹನ್‌, ಸಹಾಯಕ ಪ್ರಧಾನ ಪ್ರಬಂಧಕ ವಿಠ್ಠಲ್‌ ಉಪಸ್ಥಿತರಿದ್ದರು. ಕಿರಿಯ ಎಂಜಿನಿಯರ್‌ ರೇಖಾ ತಿಮ್ಮಪ್ಪ ಸ್ವಾಗತಿಸಿದರು, ಸಾವಿತ್ರಿ  ಪರಿಚಯಿ­ಸಿದರು, ಸಹಾಯಕ ಶಿಕ್ಷಕಿ ಪರ್‌ಪೇಚ್‌ ಡಿಸೋಜ ನಿರೂಪಿಸಿದರು, ಎಂಜಿನಿ­ಯರ್‌ ಜೆ. ಕಾವ್ಯಶ್ರೀ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT