ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಬ್ಬಂದಿ ಮನಸ್ಥಿತಿ ವಿಶ್ಲೇಷಣೆ’

ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ
Last Updated 31 ಅಕ್ಟೋಬರ್ 2014, 20:32 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಾಲೆಗಳಿಗೆ ಸಿಬ್ಬಂದಿ­ಯನ್ನು ನೇಮಿಸಿಕೊಳ್ಳುವಾಗ ಅವರ ಮನಸ್ಥಿತಿ, ಸ್ವಭಾವದ ಬಗ್ಗೆ ತಿಳಿದು ಕೊಳ್ಳ­ಬೇಕಾದ್ದು ಅಗತ್ಯವೆಂದು ಮನೋ­ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮನೋರೋಗ ಅಥವಾ ಸಂಕುಚಿತ ವ್ಯಕ್ತಿತ್ವದಿಂದಾಗಿ ವಿದ್ಯಾರ್ಥಿನಿಯರ ಮೇಲೆ ಇಂತಹ ದೌರ್ಜನ್ಯಗಳು ನಡೆ­ಯುತ್ತವೆ ಎಂಬುದು ಮನೋವೈದ್ಯರ ಅಭಿಪ್ರಾಯ. ‘ಈ ರೀತಿಯ ಕೃತ್ಯವನ್ನು ಎಸಗು­ವವರು ಖಿನ್ನತೆಯಿಂದ ಬಳಲುತ್ತಿರು­ತ್ತಾರೆ. ಹೀಗಾಗಿ ಅವರು ಮಕ್ಕಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಾರೆ. ಅಂಥವರಿಗೆ ದೊಡ್ಡವರ ಜತೆ ಹೀಗೆ ವರ್ತಿಸಲು ಒಂದು ರೀತಿಯ ಭಯವಿರುತ್ತದೆ. ಹೀಗಾಗಿ ಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳಲು ಪ್ರಯತ್ನಿಸು­ತ್ತಾರೆ.

ಮಕ್ಕಳು ಇಂತಹ ಕೃತ್ಯಗಳ ಬಗ್ಗೆ ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ ಎಂಬ ಧೈರ್ಯದೊಂದಿಗೆ ಈ ಕೃತ್ಯವನ್ನು ಎಸಗುತ್ತಾರೆ’ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮನೋವೈದ್ಯ ಡಾ.ಬಿ.ಕಪೂರ್‌ ವಿಶ್ಲೇಷಿಸಿದರು. ‘ಇಂದು ಎಲ್ಲರ ಕೈಯಲ್ಲೂ ಸ್ಮಾರ್ಟ್‌ ಫೋನ್‌ಗಳಿವೆ. ಆ ಮೂಲಕ ಅಶ್ಲೀಲ ಚಿತ್ರಗಳ ವೀಕ್ಷಣೆ ಸುಲಭವಾ ಗುತ್ತಿದೆ. ಇದು ಈಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಮಕ್ಕಳು, ಯುವಕರೆನ್ನದೆ ಎಲ್ಲರೂ ಈ ಚಿತ್ರಗಳನ್ನು ನೋಡುವುದರಿಂದ ವಿಕೃತಿ ಹೆಚ್ಚುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಕುರಿತು ತಿಳಿಸಬೇಕು. ಆಗ ಇಂತಹ ವಿಕೃತಕಾಮಿಗಳಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯ’ ಎಂದು ನಿಮ್ಹಾನ್ಸ್‌  ನಿರ್ದೇಶಕ ಡಾ.ಪಿ.ಸತೀಶ್‌ಚಂದ್ರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT