ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ಮೆಟ್ಟಿಲು ಏರಿದ ಬಿಜೆಪಿ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಿ ದೇಣಿಗೆ ಕಾನೂನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಬಿಜೆಪಿ, ಈ ಸಂಬಂಧ ದೆಹಲಿ ಹೈಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಬಿಜೆಪಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಗಳಿಗೆ ನೋಟಿಸ್‌ ನೀಡಿದೆ.

ವಿವರ: ಬ್ರಿಟನ್‌ ಮೂಲದ ವೇದಾಂತ ಕಂಪೆನಿಯ ಸಹ ಸಂಸ್ಥೆಗಳಿಂದ ದೇಣಿಗೆ ಸ್ವೀಕರಿಸಿದ್ದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ವಿದೇಶಿ ದೇಣಿಗೆ ಕಾಯ್ದೆ ಉಲ್ಲಂಘಿಸಿರುವ ಆರೋಪ ಎದುರಿಸು­ತ್ತಿವೆ. ಈ ಪ್ರಕರಣದಲ್ಲಿ ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್‌ ಬಿಜೆಪಿ
ಹಾಗೂ ಕಾಂಗ್ರೆಸ್‌ ಪಕ್ಷಗಳು ಕಾಯ್ದೆ ಉಲ್ಲಂಘಿಸಿ­ರುವುದು ಮೇಲ್ನೋಟಕ್ಕೆ ಸಾಬೀತಾಗು­ತ್ತಿದೆ ಎಂದು ಅಭಿಪ್ರಾಯ ಪಟ್ಟಿತ್ತು.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿರುವ ಬಿಜೆಪಿ, ವೇದಾಂತ ಕಂಪೆನಿಯಲ್ಲಿ ಅನಿಲ್‌ ಅಗರವಾಲ್‌ ಹಾಗೂ ಕುಟುಂಬ­­ದವರು ಶೇ 50ಕ್ಕಿಂತ ಹೆಚ್ಚು ಷೇರುಗ­ಳನ್ನು ಹೊಂದಿದ್ದಾರೆ. ಹಾಗಾಗಿ,  ಅವರು ನೀಡಿರುವ ದೇಣಿಗೆ­ಯನ್ನು ವಿದೇಶಿ ದೇಣಿಗೆ ಎಂದು ಪರಿಗ­ಣಿಸಲಾ­ಗದು ಎಂದು ಹೇಳಿದೆ.

ಬಿಜೆಪಿ   ಅರ್ಜಿ ವಿಚಾರಣೆ ನಡೆ­ಸಿದ ಮುಖ್ಯ ನ್ಯಾಯ­ಮೂರ್ತಿ ಎಚ್‌. ಎಲ್‌. ದತ್ತು ಅವರಿದ್ದ ಪೀಠ, ಕಾಂಗ್ರೆಸ್‌ ಸಲ್ಲಿಸಿರುವ ಅರ್ಜಿಯ ಜತೆಗೇ ಈ ಅರ್ಜಿಯ ವಿಚಾರಣೆ ನಡೆಸಲಾಗು­ವುದು ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT