ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಮಾರಿ ಬೆಳೆ’ ಸಂಘ ತೊರೆದ ರೈತರು

ಮಿರ್ಜಿ ಗ್ರಾಮದಲ್ಲಿ ಹುಟ್ಟುಪಡೆದ ಪರ್ಯಾಯ ಚಿಂತನೆ
Last Updated 4 ಆಗಸ್ಟ್ 2015, 9:20 IST
ಅಕ್ಷರ ಗಾತ್ರ

ಬಾಗಲಕೋಟೆ: ಕಬ್ಬು ಬೆಳೆದು ಮಬ್ಬಾ ಗಿರುವ ಜಿಲ್ಲೆಯ ಮುಧೋಳ, ಜಮ ಖಂಡಿ ಮತ್ತು ಬೀಳಗಿ ತಾಲ್ಲೂಕುಗಳ ರೈತರನ್ನು ಎಚ್ಚರಿಸುವ ಕಾರ್ಯ ತಡವಾಗಿ ಇದೀಗ ಆರಂಭವಾಗಿದೆ.

‘ಸೋಮಾರಿ ಬೆಳೆ’ ಕಬ್ಬು ಬೆಳೆದು ಆರಂಭದಲ್ಲಿ ಒಂದಷ್ಟು ಲಾಭ ಗಳಿಸಿ, ಹಮ್ಮು ಬೆಳೆಸಿಕೊಂಡಿದ್ದ ರೈತರ ತಲೆಯಲ್ಲಿ ಇದೀಗ ಹೊಸ ಆಲೋಚನೆಗಳು ಮೂಡತೊಡಗಿವೆ.

ಬೆಲೆ ಸಿಗದೆ ಹತಾಷರಾಗಿ ಆತ್ಮಹತ್ಯೆ ದಾರಿ ಹಿಡಿದಿರುವ ರೈತರನ್ನು ಸರಿದಾರಿ ಯತ್ತ ಕರೆದೊಯ್ಯಲು ಇದೀಗ ಬಾಗಲ ಕೋಟೆ ತೋಟಗಾರಿಕೆ ವಿಶ್ವವಿದ್ಯಾಲ ಯದ ವಿಸ್ತರಣ ನಿರ್ದೇಶನಾಲಯ ರೈತರ ಹೊಲದತ್ತ ಮುಖಮಾಡಿದ್ದು, ಬೆರಳೆಣಿಕೆ ರೈತರು ಸ್ಪಂದಿಸಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮದಲ್ಲಿ ಏಳೆಂಟು ರೈತರು ತಮ್ಮ ಕಬ್ಬಿನ ಹೊಲವನ್ನು ಹಂತ, ಹಂತವಾಗಿ ಸ್ವಚ್ಛಗೊಳಿಸಿ, ಆ ಹೊಲದಲ್ಲಿ ವೈಜ್ಞಾನಿಕವಾಗಿ ವೈವಿಧ್ಯಮಯ ತರಕಾರಿ ಬೆಳೆಯಲು ಹೆಜ್ಜೆ ಇಟ್ಟಿದ್ದು, ಪ್ರಥಮ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

ಮಿರ್ಜಿ ಗ್ರಾಮದ ಪ್ರಗತಿಪರ ರೈತರಾದ ಬಸವನಗೌಡ ಪೊಲೀಸ್‌ ಪಾಟೀಲ, ಯಲ್ಲಪ್ಪ ಲೋಗಾವಿ, ರಮೇಶ ಇಂಗಳೆ, ಶ್ರೀಕಾಂತ ಗೌಡ ಪಾಟೀಲ, ಸುನೀಲ್‌ ಇಂಗಳೆ, ಕೃಷ್ಣಗೌಡ ಪಾಟೀಲ ಮತ್ತಿತರರು  ಒಟ್ಟುಗೂಡಿ ‘ರೈತರ ಸ್ನೇಹ ಕೂಟ’ ಎಂಬ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. 

‘ರೈತರ ಸ್ನೇಹ ಕೂಟ’ದ ಮೂಲಕ ತಮ್ಮ ಹೊಲಗಳನ್ನು ಆವರಿಸಿರುವ ಕಬ್ಬಿಗೆ ವಿದಾಯ ಹೇಳಿ ಬದನೆ, ಹೀರೆ, ಹೂಕೋಸು, ಟಮೊಟೊ, ಕೊತಂಬರಿ, ಚೆಂಡುಹೂವು, ಮೆಂತೆ, ಪಾಲಕ್‌ ಮತ್ತಿತರರ ತರಕಾರಿ ಬೆಳೆಯನ್ನು ಬೆಳೆದು, ಮಾರಾಟ ಮಾಡುವ ಮೂಲಕ ಕೈತುಂಬ ಸಂಪಾದನೆ ಮಾಡತೊಡಗಿರುವುದು ಇದೀಗ ಸುತ್ತಮುತ್ತಲಿನ ರೈತರ ಗಮನ ಸೆಳೆದಿದೆ.

ಕಳೆ ನಿಯಂತ್ರಣಕ್ಕೆ ಹಾಗೂ ತೇವಾಂಶ ಕಾಪಾಡಲು ಹಾಗೂ ತಾಜಾ ತರಕಾರಿ ಬೆಳೆಯಲು ಅನುಕೂಲವಾಗುವಂತೆ ಮಲ್ಚಿಂಗ್‌ ಪೇಪರ್‌ ಬಳಸಿ, ಹನಿ ನೀರಾವರಿಯನ್ನು ಅಳವಡಿಸಿಕೊಂಡು ಬದನೆ, ಟಮೊಟೊ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ರೈತ ಬಸನಗೌಡ ಪಾಟೀಲ, ಕಬ್ಬನ್ನು ಬಿಟ್ಟು ತರಕಾರಿ ಬೆಳೆಯಬೇಕು ಎಂದು ಊರಿನ ಅನೇಕ ಯುವ ರೈತರು ಯೋಚಿಸಿದೆವು, ನಮ್ಮ ಆಲೋಚನೆಗೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾ ಲಯದ ಪ್ರಾಧ್ಯಾಪಕರಾದ ವಸಂತ ಗಾಣಿಗೇರ, ಡಾ.ಎ.ಬಿ.ಪಾಟೀಲ ಅವರು ಸಲಹೆ, ಸೂಚನೆಗಳನ್ನು ನೀಡಿದರು, ಇದರಿಂದ ಕಬ್ಬನ್ನು ಬಿಟ್ಟು ತರಕಾರಿ ಬೆಳೆ ಬೆಳೆಯಲು ಆರಂಭಿಸಿದೆವು ಎಂದು ಹೇಳಿದರು.

ನನ್ನ 29 ಎಕರೆ ಹೊಲದಲ್ಲಿ ಮೊದಲಿನಿಂದ ಪೂರ್ಣ ಕಬ್ಬು ಬೆಳೆಯುತ್ತಿದ್ದೆ, ಇತ್ತೀಚಿನ ಬೆಳವಣಿಗೆ ಯಿಂದ ಬೇಷರವಾಗಿ ಒಂದು ಎಕರೆ ಚೆಂಡು ಹೂವು, ಒಂದು ಎಕರೆ ಬದನೆ, ಒಂದು ಎಕರೆ ಉಳ್ಳಾಗಡ್ಡಿ, ಒಂದು  ಎಕರೆ ಗ್ಯಾಲನ್‌ ಬದನೆ ಬೆಳೆದಿದ್ದೇನೆ ಎಂದರು.

ಹೊಲದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಬಳಿಕ ಅಕ್ಕಪಕ್ಕದ ರೈತರು ಇದೀಗ ಕಬ್ಬಿನ ಬದಲು ತಾವೂ ಬೇರೆ ಬೆಳೆ ಬೆಳೆಯಲು ಮುಂದಾಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT