ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಟಾರ್ ಅಲಯನ್ಸ್’ ಸೇರಿದ ಏರ್‌ ಇಂಡಿಯಾ

ಸಾಮರ್ಥ್ಯ ವಿಸ್ತರಣೆ, ವರಮಾನ ವೃದ್ಧಿಗೆ ಅವಕಾಶ
Last Updated 24 ಜೂನ್ 2014, 19:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹತ್ವದ ಬೆಳ­ವ­ಣಿಗೆ­ಯೊಂದ­ರಲ್ಲಿ ಕೇಂದ್ರ ಸರ್ಕಾ­ರದ ಒಡೆತನದ ವಿಮಾನ­ಯಾನ ಸಂಸ್ಥೆ ‘ಏರ್‌ ಇಂಡಿಯಾ’, ಜಾಗತಿಕ ವಿಮಾನ­ಯಾನ ಒಕ್ಕೂಟ­ವಾದ ‘ಸ್ಟಾರ್ ಅಲ­ಯನ್ಸ್’ ಜತೆ ಮಂಗಳವಾರ ಮೈತ್ರಿ ಸಾಧಿಸಿದೆ.

ಜಾಗತಿಕ ಮಟ್ಟದ 26 ಪ್ರಮುಖ ವಿಮಾನ­ಯಾನ ಸಂಸ್ಥೆಗಳ ಈ ದೊಡ್ಡ ಒಕ್ಕೂಟವನ್ನು ಸೇರಿ­ಕೊಂಡು ಏರ್‌ ಇಂಡಿಯಾ ತನ್ನ ಸಾಮರ್ಥ್ಯ­ವನ್ನು ವಿಸ್ತರಿ­ಸಲು ಉತ್ತಮ ಅವಕಾಶ ದೊರಕಿದಂತಾಗಿದೆ.

ಕೊನೆಗೂ 7 ವರ್ಷಗಳ ಸುದೀರ್ಘ ಕಾಯು­ವಿಕೆ ಅಂತ್ಯವಾಗಿದ್ದು, ಲಂಡ­ನ್‌­­ನಲ್ಲಿ ನಡೆದ ಸ್ಟಾರ್ ಅಲ­ಯನ್ಸ್‌ನ ಮುಖ್ಯ ಕಾರ್ಯನಿ­ರ್ವಾಹಕ ಮಂಡಳಿ ಸಭೆಯಲ್ಲಿ ಏರ್‌ ಇಂಡಿಯಾ ಸಂಸ್ಥೆ­ಯನ್ನು ಒಕ್ಕೂಟಕ್ಕೆ ಸೇರಿಸಿಕೊ­ಳ್ಳಲು ಒಪ್ಪಿಗೆ ನೀಡಲಾಯಿತು. ಇದ­ರಿಂದ ಏರ್‌ ಇಂಡಿಯಾದ ಪ್ರಯಾಣಿ­ಕರಿಗೆ 195 ದೇಶಗಳಲ್ಲಿನ 1,328 ವಿಮಾನ ನಿಲ್ದಾಣ­ಗಳಲ್ಲಿ ಪ್ರತಿನಿತ್ಯ 21,980 ವಿಮಾನಯಾನ ಮಾರ್ಗ­ಗಳ ವ್ಯಾಪಕ  ಸೇವೆ ಪಡೆದುಕೊಳ್ಳುವ ಅವಕಾಶ ಲಭ್ಯ­ವಾಗಲಿದೆ. ಈಗಿನ ಮೈತ್ರಿ­ಯಿಂದಾಗಿ ಏರ್‌ ಇಂಡಿಯಾದ ವರ­ಮಾನದ­ಲ್ಲಿಯೂ ಶೇ 4ರಿಂದ 5ರಷ್ಟು ಹೆಚ್ಚಳ­ವಾಗುವ ನಿರೀಕ್ಷೆ ಇದೆ.

ಮುಖ್ಯವಾಗಿ ಭಾರತದಿಂದ ಅಮೆರಿ­ಕ­ದತ್ತ ಪ್ರಯಾ­ಣಿಸಲು ಬಯಸುವ ಏರ್‌ ಇಂಡಿಯಾ ಗ್ರಾಹ­ಕರಿಗೆ ವಿಮಾನ ಪ್ರಯಾಣ ಸೌಲಭ್ಯ ಹೆಚ್ಚಿದಂತಾಗಿದೆ.

ಸ್ಟಾರ್‌ ಅಲಯನ್ಸ್‌ನಲ್ಲಿ ಏರ್‌ ಇಂಡಿಯಾದ ಔಪಚಾರಿಕ ಸೇರ್ಪಡೆ ಸಮಾರಂಭ ಜುಲೈ 11ರಂದು ನಡೆ­ಯ­ಲಿದೆ. ಈ ವೇಳೆ ಅಂತರ­ರಾಷ್ಟ್ರೀಯ, ರಾಷ್ಟ್ರೀಯ ವಿಮಾನಯಾನ ಆರಂಭ ಸೂಚಕವಾಗಿ ಸ್ಟಾರ್ ಅಲ­ಯನ್ಸ್ ಚಿಹ್ನೆ, ಬಣ್ಣವಿರುವ ಬೋಯಿಂಗ್ 787 ಡ್ರೀಮ್‌ಲೈನರ್‌ ಮತ್ತು ಏರ್‌­ಬಸ್ ಎ320 ಹಾರಾಟ ನಡೆಸಲಿವೆ.

ಏರ್‌ ಇಂಡಿಯಾ ಸ್ಟಾರ್‌ ಅಲಯನ್ಸ್‌ನ ಗ್ಲೋಬಲ್‌ ನೆಟ್‌ವರ್ಕ್‌­ನಲ್ಲಿ  ವಿಮಾನ ಹಾರಾಟದ ವೇಳಾಪಟ್ಟಿ ಮತ್ತು ಟಿಕೆಟ್ ಕಾಯ್ದಿರಿಸುವಿಕೆ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿದೆ.

ವಿಮಾನಯಾನ ಸೇವೆಗಳ ಈ ಬೃಹತ್‌ ಒಕ್ಕೂಟ­ಸೇರಲು ಏರ್ ಇಂಡಿಯಾ ಸಂಸ್ಥೆಗೆ 2007ರಲ್ಲೇ ಒಪ್ಪಿಗೆ ದೊರೆತಿತ್ತಾದರೂ, ಕಾರಣಾಂತರ­ಗಳಿಂದ 2011ರಲ್ಲಿ ಒಪ್ಪಂದವನ್ನು ಅಮಾನತಿನಲ್ಲಿ­ಡಲಾಗಿತ್ತು.  

ಸ್ಟಾರ್‌ ಅಲಯನ್ಸ್ ವಿಶೇಷ
ಸ್ಟಾರ್‌ ಅಲಯನ್ಸ್‌ ಒಕ್ಕೂಟದ ಸದಸ್ಯ ಸಂಸ್ಥೆ­ಗಳು ಒಟ್ಟು 4,338 ವಿಮಾನಗಳನ್ನು ಹೊಂದಿದ್ದು, ವರ್ಷದಲ್ಲಿ 64 ಕೋಟಿ ಪ್ರಯಾ­ಣಿ­ಕರಿಗೆ ಸೇವೆ ಒದಗಿಸುತ್ತಿವೆ. ಈಗ ಏರ್‌ ಇಂಡಿಯಾ ಸಹ ಒಕ್ಕೂಟಕ್ಕೆ ಪ್ರತಿದಿನ 400 ವಿಮಾನಗಳ ಹಾರಾಟದ ಸೇವೆಯನ್ನು ಸೇರಿಸ­ಲಿದೆ.

ಜತೆಗೆ, ಹೊಸದಾಗಿ 35 ನಗರಗಳಿಗೆ ಸಂಪ­ರ್ಕ­ವನ್ನು ಒದಗಿಸಲಿದೆ. ಯುಎಸ್‌ ಕ್ಯಾರಿಯರ್‌ ಯುನೈ­ಟೆಡ್‌, ಲುಫ್ತಾನ್ಸಾ, ಏರ್‌ ಚೀನಾ ಮೊದ­ಲಾದ ದೊಡ್ಡ ವಿಮಾನಯಾನ ಸಂಸ್ಥೆ­ಗಳು ಸ್ಟಾರ್‌ ಅಲಯನ್ಸ್‌ ಸದಸ್ಯತ್ವ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT