ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌’ ನೀತಿ ಅಗತ್ಯ : ಪ್ರಧಾನಿ ಮೋದಿ

Last Updated 30 ನವೆಂಬರ್ 2014, 15:42 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ) :  ಪಾರದರ್ಶಕ  ಆಡಳಿತಕ್ಕೆ ‘ಸ್ಮಾರ್ಟ್‌’(SMART) ಪರಿಕಲ್ಪನೆಯ ಅಗತ್ಯವಿದೆ ಎಂದು ಗುವಾಹಟಿಯಲ್ಲಿ ನಡೆದ 49ನೇ ಡಿಜಿಪಿ/ ಐಜಿಪಿ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದರು.

ಪೊಲೀಸ್‌ ಪಡೆ ಹಾಗೂ ಗುಪ್ತಚರ ಇಲಾಖೆಗಳು ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡಬೇಕು ಎಂದರು. ಸರ್ಕಾರವು ಉತ್ತಮವಾಗಿ ಆಡಳಿತ ನಡೆಸಲು ಪರಿಣಾಮಕಾರಿ ಗುಪ್ತಚರ ವ್ಯವಸ್ಥೆ ಇದೆ. ಆದರೆ ಮದ್ದುಗುಂಡು ಅಥವಾ ಶಸ್ತ್ರಾಸ್ತ್ರಗಳಿಂದ ಸರ್ಕಾರ ನಡೆಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.  

‘ಸ್ಮಾರ್ಟ್‌’(SMART)  ನೀತಿ ಎಂದರೆ ಶಿಸ್ತು, ಸೂಕ್ಷ್ಮತೆ, ಆಧುನಿಕತೆ ಮತ್ತು ಎಚ್ಚರಿಕೆಯ ಹೊಣೆಗಾರಿಕೆಯಾಗಿದೆ.  ಸ್ವಾತಂತ್ರ್ಯ ನಂತರ 33,000 ಸಾವಿರ ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಇದು ಸಣ್ಣ ಸಂಖ್ಯೆಯಲ್ಲ ಅವರ ಬಲಿದಾನಕ್ಕೆ ನಾವು ಗೌರವ ಅರ್ಪಿಸಬೇಕು ಎಂದರು.

ಪ್ರತಿ ರಾಜ್ಯಗಳ ಸ್ಥಳೀಯ ಭಾಷೆ ಹಾಗೂ ರಾಷ್ಟ್ರೀಯ ಭಾಷೆಗಳಲ್ಲಿ ಇ–ಬುಕ್‌ ಸೇವೆಯನ್ನು ಒದಗಿಸಬೇಕು ಅದರಲ್ಲಿ ಪೊಲೀಸ್‌ ಬಲಿದಾನ ಕುರಿತು ಮಾಹಿತಿ ನೀಡಬೇಕು. ಇದರಿಂದ ಇತರರಿಗೆ  ಸ್ಪೂರ್ತಿಯಾಗುತ್ತದೆ ಎಂದು ಪ್ರಧಾನಿ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT