ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್ ಸಿಟಿ’ ರೂಪುರೇಷೆ ಶೀಘ್ರ ಅಂತಿಮ

Last Updated 29 ಜನವರಿ 2015, 12:34 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 100 ‘ಸ್ಮಾರ್ಟ್ ಸಿಟಿ’ ಯೋಜನೆಯ ರೂಪುರೇಷೆಗಳು ಫೆಬ್ರುವರಿ ಕೊನೆಯ ವೇಳೆಗೆ ಅಂತಿಮಗೊಳ್ಳಲಿವೆ ಎಂದು ಕೇಂದ್ರ ನಗರಾಭಿವೃದ್ಧಿ ಕಾರ್ಯದರ್ಶಿ ಶಂಕರ್ ಅಗರ್ ವಾಲ್ ಗುರುವಾರ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆ ಅಡಿ 100 ನಗರಗಳನ್ನು ಗುರುತಿಸುವ ಕಾರ್ಯ ಇನ್ನೆರೆಡು ದಿನಗಳಲ್ಲಿ ಪೂರ್ಣಗೋಳ್ಳಲಿದೆ. ಫೆ. 28ರ ಒಳಗೆ ಯೋಜನೆಯ ರೂಪುರೇಷೆಗಳು, ನಗರಗಳ ರಚನೆಯಲ್ಲಿ ಪಾಲಿಸಬೇಕಾದ ಸೂಚನೆಗಳ ನೀತಿ ಚೌಕಟ್ಟು ಅಂತಿಮಗೊಳ್ಳಲಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರದ ದೂರದೃಷ್ಟಿಯ ಯೋಜನೆಯ ‘ಸ್ಮಾರ್ಟ್ ಸಿಟಿ’ಗಳು ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವ ಉದ್ದೇಶ ಹೊಂದಿವೆ. ‘24x7’ ನೀರು, ವಿದ್ಯುತ್ ಪೂರೈಕೆ ಹಾಗೂ ಶೇ 100ರಷ್ಟು ಪೂರ್ಣ ಪ್ರಮಾಣದ ಚರಂಡಿ ಮತ್ತು ಒಳಚರಂಡಿ, ಘನ ತ್ಯಾಜ್ಯ ನಿರ್ವಹಣೆ ಹಾಗೂ ಉನ್ನತಮಟ್ಟದ ಮೂಲಸೌಲಭ್ಯ ಹೊದಲಿವೆ ಎಂದು ಅವರು ಮಾಹಿತಿ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಖಾಸಗಿ ಸಹಭಾಗಿತ್ವವನ್ನು ನಿರೀಕ್ಷಿಸುತ್ತಿದೆ ಎಂದು ಅವರು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆ ಖಾಸಗಿ ಸಹಭಾಗಿತ್ವದಲ್ಲಿ ರೂಪತಳೆಯುತ್ತಿದೆ. ಪ್ರತಿ ನಗರ ನಿರ್ಮಾಣಕ್ಕೆ ಮುಂದಿನ 10 ವರ್ಷದಲ್ಲಿ ಕನಿಷ್ಠ ರೂ ಒಂದು ಸಾವಿರ ಕೋಟಿ ತೊಡಗಿಸುವ ಅಗತ್ಯವಿದೆ. ಶೇ 80ರಿಂದ 85ರಷ್ಟು ಖಾಸಗಿಯವರ ಹೂಡಿಕೆ ಈ ಅಭಿವೃದ್ಧಿ ಕಾರ್ಯಕ್ಕೆ ಅಗತ್ಯವಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT