ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಭಾರತ’ ರಾಜಕೀಯೇತರ ಅಭಿಯಾನ'

Last Updated 2 ಅಕ್ಟೋಬರ್ 2014, 11:08 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಅತ್ಯಂತ ದೊಡ್ಡ ಸ್ಚಚ್ಛತಾ ಆಂದೋಲನಕ್ಕೆ ಗುರುವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಸ್ವಚ್ಛ ಭಾರತ’ ರಾಜಕೀಯೇತರ ಹಾಗೂ ದೇಶಭಕ್ತಿಯಿಂದ ಸ್ಫೂರ್ತಿಗೊಂಡ ಅಭಿಯಾನ ಎಂದು ತಿಳಿಸಿದ್ದಾರೆ.

ಈ ಅಭಿಯಾನಕ್ಕೆ 62 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಎಲ್ಲಾ ಸಾಧನೆಗೂ ತಮ್ಮ ಸರ್ಕಾರ ಖ್ಯಾತಿ ತೆಗೆದುಕೊಳ್ಳುತ್ತಿದೆ ಎಂಬ ಟೀಕೆಯನ್ನು ಅಲ್ಲಗಳೆದ ಪ್ರಧಾನಿ ಮೋದಿ ಅವರು, ಹಿಂದಿನ ಎಲ್ಲಾ ಸರ್ಕಾರಗಳು ಭಾರತವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿವೆ ಎಂಬುದನ್ನು ಒಪ್ಪಿಕೊಂಡರು.

ರಾಜಪಥ್‌ನಲ್ಲಿ ಐದು ವರ್ಷಗಳ ಅವಧಿಯ ಸ್ವಚ್ಛತಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ರಾಜಕೀಯ ಬಗ್ಗೆ ಮಾತನಾಡುತ್ತಿಲ್ಲ. ಈ ಆಂದೋಲನ ರಾಜಕೀಯೇತರ ಆಂದೋಲನ. ಇದು ನನ್ನ ದೇಶಭಕ್ತಿಯನ್ನು ಪ್ರೇರಿಪಿಸಿದೆ ವಿನಃ ರಾಜಕೀಯವನ್ನಲ್ಲ. ರಾಜಕೀಯವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಬಾರದು. ಶುದ್ಧ ಮನಸ್ಸಿನಿಂದ ಮಾಡಬೇಕು. ರಾಜಕೀಯ ಎಂಬ ಬ್ರಷ್‌ನಿಂದ ಇದಕ್ಕೆ ಬಣ್ಣ ಬಳಿದರೆ ಭಾರತ ಮಾತೆಗೆ ನಾವು ಅಪಕಾರ ಮಾಡಿದಂತೆ’ ಎಂದು ಪ್ರಧಾನಿ ನುಡಿದರು.

‘ದೇಶವನ್ನಾಳಿದ ಹಿಂದಿನ ಎಲ್ಲಾ ಸರ್ಕಾರಗಳೂ ಒಂದಿಲ್ಲ ಒಂದು ಬಗೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲು ಯತ್ನಿಸಿವೆ. ಸಾಕಷ್ಟು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿವೆ. ಅವರನ್ನೆಲ್ಲರನ್ನು ಅಭಿನಂದಿಸುತ್ತೇನೆ’ ಎಂದು ತಮ್ಮ 25 ನಿಮಿಷಗಳ ಭಾಷಣದಲ್ಲಿ ಮೋದಿ ತಿಳಿಸಿದ್ದಾರೆ.

ಇದೇ ವೇಳೆ, ಇಂದಿನ ಅಭಿಯಾನ ಕೇವಲ 'ಪ್ರಚಾರ'ಕ್ಕಾಗಿ ಎನಿಸಬಾರದು ಎಂದೂ ಅವರು ಅಭಿಪ್ರಾಯ ಪಟ್ಟರು.

ಅಕ್ಟೋಬರ್ 2, 2014ರಿಂದ ಐದು ವರ್ಷಗಳ ಅವಧಿಯಲ್ಲಿ 4041 ಶಾಸನವಿಹಿತ ಪಟ್ಟಣಗಳಲ್ಲಿ ಈ ಅಭಿಯಾನ ಅನುಷ್ಠಾನ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 62,009 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 14, 623 ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT