ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಶೌಚಾಲಯ ಅಭಿಯಾನ ಅಗತ್ಯ’

ಎಫ್‌ಕೆಸಿಸಿಐ–ಕೆಎಸ್‌ಟಿಡಿಸಿ ಸಭೆ
Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:‘ಯಾವುದೇ ಪ್ರವಾಸಿ ತಾಣಕ್ಕೆ ಹೋದರೂ ಶೌಚಾಲಯಗಳು ಗಬ್ಬು ನಾರುತ್ತವೆ. ನಿಂತುಕೊಳ್ಳಲು ಸಾಧ್ಯವಾಗದಷ್ಟು ಗಲೀಜಾಗಿರುತ್ತವೆ. ಈ ರೀತಿ ಇದ್ದರೆ ರಾಜ್ಯದಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿ ಹೇಗೆ ಸಾಧ್ಯ?’ –ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಚರ್ಚಿಸಲು ನಗರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘ (ಎಫ್‌ಕೆ ಸಿಸಿಐ) ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯರೊಬ್ಬರು ಎತ್ತಿದ ಪ್ರಶ್ನೆ ಇದು.

ಇದು ನಿಜವೆಂದು ಒಪ್ಪಿಕೊಂಡಿದ್ದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ವ್ಯವಸ್ಥಾಪಕ ನಿರ್ದೇಶಕ ಡಾ.ಪಿ. ಎಸ್‌.ಹರ್ಷ. ‘ಸ್ವಚ್ಛ ಶೌಚಾಲಯಗಳೇ ಅಪರೂಪ. ಜೊತೆಗೆ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಸ್ವಚ್ಛ ಭಾರತ ಆಂದೋಲನದಂತೆ ಸ್ವಚ್ಛ ಶೌಚಾಲಯದ ಅಭಿಯಾನ ನಡೆಯ ಬೇಕಿದೆ. ಎಷ್ಟು ಬೇಕಾದರೂ ಶೌಚಾ ಲಯ ನಿರ್ಮಿಸಲು ಸರ್ಕಾರ ಸಿದ್ಧವಿದೆ. ಆದರೆ, ಅವುಗಳ ನಿರ್ವಹಣೆಗೆ ಕಾರ್ಪೊ ರೇಟ್‌ ಕಂಪೆನಿಗಳು ಮುಂದಾಗಬೇಕು. ಆ ವೆಚ್ಚವನ್ನೂ ಸರ್ಕಾ ರದಿಂದಲೇ ಭರಿಸಲಾಗುವುದು’ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಎಫ್‌ಕೆಸಿಸಿಐ ಸದಸ್ಯರಿಂದ ಹಲವು ಸಲಹೆಗಳು ಮೂಡಿಬಂದವು. ಈ ಸಂಬಂಧ ಸಹಕಾರ ನೀಡಲು ತಾವು ಸಿದ್ಧ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಸ್. ಸಂಪತ್‌ ರಾಮನ್ ಹೇಳಿದರು.ನಾಲ್ಕು ಟ್ರೆಕ್ಕಿಂಗ್‌ ಕೇಂದ್ರಗಳು: ಸರ್ಕಾರದ ವತಿಯಿಂದಲೇ ನಾಲ್ಕು ಟ್ರೆಕ್ಕಿಂಗ್‌ ಕೇಂದ್ರಗಳನ್ನು ಗುರುತಿಸಲಾ ಗಿದ್ದು ನವೆಂಬರ್‌ 1ರಿಂದ ಈ ಕೇಂದ್ರ ಗಳು ಕಾರ್ಯಾರಂಭ ಮಾಡಲಿವೆ ಎಂದು ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಜೆ.ಹೊಸಮಠ ಹೇಳಿದರು.

‘ಕ್ಯಾಸಲ್‌ ರಾಕ್‌, ಕೂಡಿಗೆ, ಭಗವತಿ ಹಾಗೂ ಭೀಮ್‌ಗಡದಲ್ಲಿ  ಟ್ರೆಕ್ಕಿಂಗ್‌ ಕೇಂದ್ರಗಳನ್ನು ಗುರುತಿಸಲಾಗಿದೆ’ ಎಂದರು.‘ಅತಿ ಸೂಕ್ಷ್ಮ ಪ್ರದೇಶಗಳಲ್ಲಿರುವ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಗಳಲ್ಲಿ ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರದೇ ಶಗಳಲ್ಲಿ ಹವಾನಿಯಂತ್ರಕ ಹಾಗೂ ಡೀಸೆಲ್‌ ಬಳಸದಂತೆ ಅರಿವು ಮೂಡಿ ಸಲಾಗುವುದು. ಟರ್ಕಿ ಟವೆಲ್‌ಗಳನ್ನು ಬಳಸಬಾರದು. ಇವುಗಳ ಸ್ವಚ್ಛತೆಗೆ ಹೆಚ್ಚು ನೀರು ವ್ಯಯವಾಗುತ್ತದೆ. ಜೊತೆಗೆ ನವೀಕರಿಸಬಹುದಾದ ಇಂಧ ನಗಳ ಬಳಕೆ ಮೂಲಕ ಪರಿಸರವನ್ನು ಸಂರಕ್ಷಿಸಬಹುದು’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT