ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವತಂತ್ರ ದೇಶ’ವಾಗಿ ಪೂರ್ವ ಉಕ್ರೇನ್: ಪುಟಿನ್‌ ಸಲಹೆ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಾಸ್ಕೊ (ಎಎಫ್‌ಪಿ): ಹಿಂದಿನ ಸೋವಿ­ಯತ್‌ ಒಕ್ಕೂಟದ ಭಾಗ­ವಾ­ಗಿದ್ದ ಪೂರ್ವ ಉಕ್ರೇನ್ ಪ್ರದೇಶವನ್ನು ‘ಸ್ವತಂತ್ರ ದೇಶ’­ವನ್ನಾಗಿ ಪರಿಗಣಿಸು­ವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾನುವಾರ ಸಲಹೆ ಮಾಡಿದ್ದಾರೆ.

ಪೂರ್ವ ಉಕ್ರೇನ್‌ ಭಾಗದಲ್ಲಿ ವಾಸಿ­­ಸು­ತ್ತಿರುವ ಜನರ ಹಕ್ಕು­ಗಳನ್ನು ಕಾಪಾ­ಡುವ ಉದ್ದೇಶದಿಂದ ಪೂರ್ವ ಉಕ್ರೇನ್‌ ಸ್ವತಂತ್ರ ದೇಶದ ಸ್ಥಾಪನೆ ಕುರಿತು ದೃಢ­ವಾದ ಮಾತು­ಕತೆ ನಡೆಸಬೇಕಾಗಿದೆ ಎಂದು ಟಿ.ವಿ ಸಂದರ್ಶನವೊಂದರಲ್ಲಿ ಪುಟಿನ್‌ ತಿಳಿಸಿದ್ದಾರೆ. 
ಈ ಸಂದರ್ಶನವನ್ನು ಶುಕ್ರವಾರ ಚಿತ್ರೀ­ಕರಿಸಿಕೊಂಡಿದ್ದು, ಕಾರ್ಯ­ಕ್ರಮ­ದಲ್ಲಿ ರಷ್ಯಾದ ಮೇಲೆ ಹೆಚ್ಚುವರಿ ಪಾಶ್ಚಾತ್ಯ ನಿರ್ಬಂಧಗಳ ಬಗ್ಗೆ ಪುಟಿನ್‌ ನೇರವಾಗಿ ಮಾತನಾಡಲಿಲ್ಲ. 

ಫೆಬ್ರುವರಿಯಲ್ಲಿ ಪೂರ್ವ ಉಕ್ರೇನ್‌ ಭಾಗದಲ್ಲಿ ಉಂಟಾದ ಬಿಕ್ಕಟ್ಟು ಸಂದ­ರ್ಭ­­ದಲ್ಲಿ ಕ್ರೆಮ್ಲಿನ್‌ ಅಧ್ಯಕ್ಷ ವಿಕ್ಟರ್‌ ಯನುಕೋಚ್‌ ಅವರ ವಿರುದ್ಧ ನಡೆದ ಕ್ಷಿಪ್ರ­ಕ್ರಾಂತಿಗೆ ಬೆಂಬಲ ನೀಡಿದ ಆರೋಪ­ವನ್ನು ಅವರು ಈ ಸಂದರ್ಭದಲ್ಲಿ ತಳ್ಳಿಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT